ಬಿಗ್ ಬಾಸ್ ಮನೆಯ ಬೋನಿನಲ್ಲಿ ಸಿಕ್ಕಿಬಿದ್ದ ವರ್ತೂರು ಸಂತು, ಹೊರಗಡೆ ಬರಲಾಗದೆ ಕ.ಣ್ಣೀರು
ಹೊರಗಿನಿಂದ ಅರಮನೆ ಒಳಗಡೆ ಹೋದ್ರೆ ಸೆರೆಮನೆ ಇದೇನು ಅಂದುಕೊಂಡಿರಾ ಬಿಗ್ಬಾಸ್ ಮನೆಯ ಬಗ್ಗೆ ಯೋಗರಾಜ್ ಭಟ್ರು ಬರೆದ ಹಾಡಿದು. ಇದು ನಿಜವೆನ್ನುತ್ತಾರೆ ಕೆಲವರು ಹೌದು ಬಿಗ್ಬಾಸ್ ಗೆ ಎಂಟ್ರಿ ಕೊಟ್ಟಾಗ ಹೊಸ ಹೊಸ ಮುಖ ಗಳು ನೋಡಿದೊಡನೆ ಇವರು ಹೇಗೆ ಎಂದು ಅರ್ಥವಾಗದ ಮನಸ್ಸುಗಳು .
ಅಂತಹ 17 ಜನರನ್ನು ಒಂದೇ ಮನೆಯಲ್ಲಿ ಜೊತೆಯಾಗಿ ಹಲವಾರು ತರಹದ ಟಾಸ್ಕ್ ಗಳನ್ನು ನೀಡಿ ಅವರ ನೈಪುಣ್ಯತೆ ಹಾಗೂ ಅವರ ನೈಜ ಗುಣಗಳನ್ನು ಹೊರ ತೆಗೆಯುವುದೇ ಬಿಗ್ಬಾಸ್ ಮನೆಯಲ್ಲಿ ನಡೆಯುವ ಆಟ. ಮನೆಯಲ್ಲಿ ಮೊಬೈಲ್ ಇರೋದಿಲ್ಲ. ಕೆಲವರನ್ನು ಕಂಡರೆ ಇನ್ನೂ ಕೆಲವರಿಗೆ ಅದೇನೋ ಹೊಟ್ಟೆ ಕಿಚ್ಚು ಆಗೆಲ್ಲ ಬಿಗ್ಬಾಸ್ ಮನೆ ಸಾಕೆನಿಸಿ ತ್ತಿರುತ್ತದೆ.
ಆದರೆ ಈ ಮನೆಗೆ ಹೋಗುವ ಮುನ್ನವೇ ಅಗ್ರಿಮೆಂಟ್ ಗಳಿರುತ್ತದೆ. ಅದನ್ನು ಓದಿ ಒಳಗಿರುವ ಸ್ಪರ್ಧಿಗಳು ಸಹಿ ಹಾಕಿ ನೀಡಬೇಕಾಗುತ್ತದೆ. ಇನ್ನು ಮನೆಯಲ್ಲಿ ಎನಾದರು ದುರ್ಘಟನೆ ಇಲ್ಲವೇ ಆರೋಗ್ಯದಲ್ಲಿ ಏನಾದರೂ ಏರುಪೇರು ಆದರೆ ಮಾತ್ರ ಮನೆಯಿಂದ ಆಚೆಗೆ ಕಳಿಸಲಾಗುತ್ತದೆ. ಅದರ ಹೊರತಾಗಿ ಸಕಾ ಸುಮ್ಮನೇ ಬಿಗ್ಬಾಸ್ ಮನೆಯಿಂದ ಹೋಗುವಂತಿಲ್ಲ.
ಇನ್ನು ಅದರ ಹೊರತಾಗಿಯೂ ಹೋಗಬೇಕೆಂದರೆ ಅಗ್ರಿಮೆಂಟ್ ಪ್ರಕಾರ ಸ್ಪರ್ಧಿಯು 2ಕೋಟಿಯಷ್ಟು ಹಣವನ್ನು ಕಟ್ಟಿ ಆಮೇಲೆ ಬಿಗ್ಬಾಸ್ ಮನೆಯಿಂದ ಆಚೆಗೆ ಹೋಗಬಹುದಾಗಿದೆ. ಇನ್ನು ಕನ್ನಡದ ಬಿಗ್ಬಾಸ್ ಸೀಸನ್ ನಲ್ಲಿ ಆ ರೀತಿ ಹೋದವರು ಈ ವರೆಗೆ ಯಾರು ಕೂಡ ಇಲ್ಲ. ಇದೀಗ ಮೊದಲ ಬಾರಿಗೆ ವರ್ತೂರ್ ಸಂತೋಷ್ ಹೊರಹೋಗುವ ಮಾತು ಆಡಿದ್ದಾರೆ.