• Uncategorised

ಮಧ್ಯರಾತ್ರಿ ಸ್ಮಶಾನದ ವಿಡಿಯೋ ಮಾಡಲು ಹೋದ ಕನ್ನಡದ ಯೂಟ್ಯೂಬರ್, ನಡುರಾತ್ರಿ 12 ಗಂಟೆಗೆ ಏನಾಯಿತು ಗೊ.ತ್ತಾ

ಹಿಂದೂ ಧರ್ಮದಲ್ಲಿ ಏಕಾದಶಿ, ದ್ವಾದಶಿಗಳಂತೆಯೇ ಪ್ರತಿ ಮಾಸವೂ ಬರುವ ಅಮಾವಾಸ್ಯೆ, ಹುಣ್ಣಿಮೆಗಳಿಗೂ ವಿಶೇಷವಾದ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಮಾವಾಸ್ಯೆಯ ದಿನವನ್ನು ಪೂರ್ವಜರಿಗೆ ಮೀಸಲಿಡಲಾಗಿದೆ. ಅಲ್ಲದೆ, ಅಮಾವಾಸ್ಯೆಯ ದಿನ ಮಾಡುವ ತಂತ್ರ-ಮಂತ್ರಗಳನ್ನೂ ಬಹಳ ಪರಿಣಾಮಕಾರಿ ಎಂದು ನಂಬಲಾಗಿದೆ.

ಇವೆಲ್ಲದರ ಹೊರತಾಗಿ, ಅಮಾವಾಸ್ಯೆ ಎಂದರೆ ಕೆಲವರಲ್ಲಿ ಭಯವೂ ಇದೆ. ಅಮಾವಾಸ್ಯೆಯ ದಿನ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ವಾಸ್ತವವಾಗಿ, ಅಮಾವಾಸ್ಯೆಯ ರಾತ್ರಿಯಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದ್ದು, ನಿಮಗೆ ತಿಳಿದೋ ಅಥವಾ ತಿಳಿಯದೆಯೋ ಅಮಾವಾಸ್ಯೆಯ ಕರಾಳ ರಾತ್ರಿಯಲ್ಲಿ ಮಾಡುವ ಕೆಲವು ಕೆಲಸಗಳು ನಿಮ್ಮ ಜೀವನವನ್ನೇ ನಾಶ ಪಡಿಸಬಹುದು ಎಂತಲೂ ಹೇಳಲಾಗುತ್ತದೆ.

ಅದರಲ್ಲಿ ಒಂದು ಸ್ಮಶಾನಕ್ಕೆ ಹೋಗುವುದು. ಹೌದು ಇಲ್ಲೊಬ್ಬ ಕನ್ನಡದ ಯುಟ್ಯುಬರ್ ಅಮಾವಾಸ್ಯೆ ರಾತ್ರಿ ಸ್ಮಶಾನಕ್ಕೆ ಹೋಗಿ ಬಿರಿಯಾನಿ ತಿಂದು ಅಲ್ಲೊಂದು ರಾತ್ರಿ ಕಳೆದಿದ್ದಾರೆ. ಕೇಳಲು ಕಷ್ಟವಾದರೂ ಇದು ನಿಜ. ಮೂಲತಃ ರಾಮನಗರದವರಾದ ವಿಕಾಸ್ ಗೌಡ ಅವರು ಹೊಸ ಹೊಸ ಅಡ್ವೆಂಚರಸ್ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಕೇವಲ ವ್ಯೂವ್ಸ್ ಗೆಂದು ಮಾತ್ರವಲ್ಲ ಅವರ ಫ್ಯಾಷನ್ ಕೂಡ ಯಾರು ಮಾಡದ ಕೆಲಸಗಳನ್ನು ತಾವು ಮಾಡೋದು.

ಈ ಹಿಂದೆ ರಾತ್ರಿ ವೇಳೆಯಲ್ಲಿ ಬೆಂಗಳೂರಿನ ಅಂಡರ್ ಪಾಸ್ ಹಾಗೂ ಮಾಲ್ ಒಂದರಲ್ಲಿ ಇಡೀ ರಾತ್ರಿ ಕಳೆಯುವ ಅವರ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಅಮಾವಾಸ್ಯೆ. ರಾತ್ರಿ ಸ್ಮಶಾನದಲ್ಲಿ ಒಂದು ಕ್ಯಾಂಪ್ ಹಾಕಿ ಬಿರಿಯಾನಿ ತಿಂದು ಕಳೆದಿದ್ದಾರೆ. ನೋಡಲೇ ಭಯವಾಗುವ ಈ ವೀಡಿಯೊ ಪೂರ್ತಿ ನೋಡಿ ಮುಗಿಸುವಾಗ ಬೆವರು ಸುರಿಯುತ್ತದೆ. ಅಂತಹದರಲ್ಲಿ ಅಲ್ಲೇ ಇರಲು 2 ಗುಂಡಿಗೆ ಬೇಕೆ ಬೇಕು.

You may also like...