• Uncategorised

ಮುದ್ದಾದ ಪತ್ರಕರ್ತೆಗೆ ನಡು ಬೀದಿಯಲ್ಲಿ ಕಿಸ್ ಕೊಟ್ಟ ಸಲ್ಮಾನ್ ಖಾನ್, ಇದೆಂತಹ ಸಂಸ್ಕೃತಿ ಎಂದು ರೊ.ಚ್ಚಿಗೆದ್ದ ನೆಟ್ಟಿಗರು

ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ತಮ್ಮ ಪ್ರೀತಿಪಾತ್ರರೊಂದಿಗೆ ತುಂಬಾ ಸಲುಗೆಯಲ್ಲಿರುತ್ತಾರೆ. ಈ ಕುರಿತು ನಾವು ಅನೇಕ ವಿಡಿಯೋಗಳಲ್ಲಿ ನೋಡಿದ್ದೇವೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಭಾಗವಹಿಸಿದ್ದ ಅವರು, ಈ ಸಂದರ್ಭದಲ್ಲಿ ಪತ್ರಕರ್ತೆಗೆ ಮುತ್ತಿಟ್ಟ ವಿಡಿಯೋ ನೆಟ್‌ನಲ್ಲಿ ಹರಿದಾಡುತ್ತಿದೆ.

ಹೌದು.. ಸಲ್ಮಾನ್‌ ಖಾನ್‌ ಅವರು ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಹಿರಿಯ ವರದಿಗಾರ್ತಿ ತಮ್ಮ ಗೆಳತಿಯನ್ನು ನೋಡಿ ಅಪ್ಪಿ ಮುತ್ತಿಟ್ಟು ಆತ್ಮೀಯವಾಗಿ ಸ್ವಾಗತಿಸಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಲ್ಲದೆ ಬಿಗ್‌ ಸ್ಟಾರ್‌ ಆದ್ರೂ ಸಹ ತಮ್ಮ ಗೆಳಯರು ಎಷ್ಟು ಪ್ರೀತಿಯಿಂದ ಮಾತನಾಡಿಸ್ತಾರೆ ಸಲ್ಲು ಅಂತ ಹೊಗಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೈಗರ್ 3 ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ದೀಪಾವಳಿ ಉಡುಗೊರೆಯಾಗಿ ನವೆಂಬರ್ 12 ರಂದು ಈ ಚಿತ್ರ ತೆರೆಗೆ ಬಂದಿತ್ತು. ಮೊದಲು ನೆಗೆಟಿವ್‌ ಟಾಕ್‌ ಬಂದರೂ ಆಮೇಲೆ ಟೈಗರ್‌ ಕ್ರೇಜ್‌ ಹೆಚ್ಚಾಯಿತು. ಸಧ್ಯ ಬಾಕ್ಸ್ ಆಫೀಸ್‌ನಲ್ಲಿ ಸಲ್ಲು ಸಿನಿಮಾ ಧೂಳೆಬ್ಬಿಸುತ್ತಿದೆ.

ಚಿತ್ರ ಬಿಡುಗಡೆಯಾದ ಐದು ದಿನದೊಳಗೆ ರೂ. 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಆಕ್ಷನ್ ಸೀಕ್ವೆನ್ಸ್ ಅಭಿಮಾನಿಗಳನ್ನು ಬೆರಗುಗೊಳಿಸುತ್ತಿದೆ. ಟೈಗರ್ ಜಿಂದಾ ಹೈ ಚಿತ್ರದ ಮುಂದುವರಿದ ಭಾಗವಾಗಿ ಟೈಗರ್‌ 3 ನಿರ್ಮಾಣವಾಗಿದೆ.

You may also like...