• Uncategorised

‘ಮುದ್ದಾದ ರಂಭಾ ಅವರ ಜೀವನವನ್ನು ಹಾಳು ಮಾಡಿದ್ದು ಯಾರು ಗೊ.ತ್ತಾ’

ರಂಭಾ ಬೇಡ ಜಂಬ ಎಂದು ಸೌಂದರ್ಯದಿಂದಲೇ ಗಮನ ಸೆಳೆದಿದ್ದ ನಟಿ ತೆಲುಗು ಮತ್ತು ಹಿಂದಿ ಸ್ಟಾರ್ ಹೀರೋಗಳ ಪಕ್ಕದಲ್ಲಿ ಟಾಲಿವುಡ್ ನ ಸ್ಟಾರ್ ಹೀರೋಯಿನ್ ಜೋಡಿಯಾಗಿದ್ದರು. ನಟಿ ಮಿಥುನ್ ಚಕ್ರವರ್ತಿಯೊಂದಿಗೆ ಬಾಲಿವುಡ್ ಗೆ ಎಂಟ್ರಿ ನೀಡಿದ್ರು. ಸಲ್ಮಾನ್ ಖಾನ್, ಗೋವಿಂದ ಮತ್ತು ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ನಟಿಸಿದ್ರು.

ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳಲ್ಲಿ ನಟಿಸಿದ ನಟಿ ದಿಢೀರ್ ಆಗಿ ಗ್ಲಾಮರ್ ಲೋಕವನ್ನೇ ತೊರೆದಿದ್ದಾರೆ. ತೆಲುಗಿನ ಅಡಕ್ಕು ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದ ಈ ನಟಿ 8 ವಿವಿಧ ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. 1990-2000ರಲ್ಲಿ ರಂಭಾ ಟಾಪ್ ನಾಯಕಿಯರಲ್ಲಿ ಒಬ್ಬರಾಗಿದ್ರು. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, ನಟಿ ಚಿತ್ರರಂಗ ತೊರೆದ್ರು. ನಾವು ಮಾತನಾಡುತ್ತಿರುವುದು ಬೇರೆ ಯಾರ ಬಗ್ಗೆಯೂ ಅಲ್ಲ ನಟಿ ರಂಭಾ ಬಗ್ಗೆ.

ನಟಿ ಕೊನೆಯದಾಗಿ 2011ರಲ್ಲಿ ಮಲಯಾಳಂ ಚಿತ್ರ ಫಿಲ್ಮ್ ಸ್ಟಾರ್ ನಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಅವರು ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಬಹುಬೇಡಿಕೆಯ ನಟಿಯಾಗಿರುವಾಗ್ಲೆ ರಂಭಾ ಚಿತ್ರರಂಗಕ್ಕೆ ವಿದಾಯ ಹೇಳಿದ್ರು. 1995ರಲ್ಲಿ ‘ಜಲ್ಲಾದ್’ ಮೂಲಕ ಹಿಂದಿಯಲ್ಲಿ ತಮ್ಮ ಸಿನಿ ಕೆರಿಯರ್ ಪ್ರಾರಂಭಿಸಿದ್ರು. ಈ ಚಿತ್ರದ ನಾಯಕ ಮಿಥುನ್ ಚಕ್ರವರ್ತಿ. ಆದರೆ ರಂಭಾ ಅವರ ಮೊದಲ ಚಿತ್ರ ಫ್ಲಾಪ್ ಆಗಿತ್ತು.

ಇದಾದ ನಂತರ ಅವರು ಕಹಾರ್, ಜಂಗ್, ಜುರ್ಮಾನಾ ಮುಂತಾದ ಹಲವು ಹಿಂದಿ ಚಿತ್ರಗಳನ್ನು ಮಾಡಿದರು ಆದರೆ ಅವು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದವು. ಅದ್ರಿಂದ ಬೇಸರಗೊಂಡು ಚಿತ್ರದಲ್ಲಿ ನಟಿಸುವ ಆಸಕ್ತಿಯನ್ನು ಬಿಟ್ಟಿದ್ದರು.

You may also like...