ಮೊದಲ ಬಾರಿಗೆ ತಂಗಿ ಮಗುವನ್ನು ನೋಡಲು ಹೋದ ಕಾರ್ತಿಕ್ ಕಣ್ಣಲ್ಲಿ ನೀರು
ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಸದ್ಯ ಟ್ರೋಪಿ ಹಿಡಿದು ಸುತ್ತಾಡುತ್ತಿದ್ದಾರೆ. ತಮಗೆ ವೋಟ್ ಮಾಡಿ ಗೆಲ್ಲಿಸಿದ್ದಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಇತ್ತೀಚಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಕಾರ್ತಿಕ್, ಅದಾದ ಬಳಿಕ ಹುಟ್ಟೂರು ಚಾಮರಾಜನಗರಕ್ಕೂ ಭೇಟಿ ನೀಡಿದ್ದಾರೆ. ಕಾರ್ತಿಕ್ ಆಗಮಿಸುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಸ್ನೇಹಿತರು ಸ್ವಾಗತಿಸಿದ್ದಾರೆ. ವಿಶೇಷ ಕಾರ್ಯಕ್ರಮ ಮಾಡಿದ್ದಾರೆ. ಇದೇ ವೇಳೆ ಅಜ್ಜಿ ಮನೆಯಲ್ಲಿದ್ದ ತಂಗಿಯ ಬಳಿಯೂ ಹೋಗಿ ಪುಟಾಣಿ ಅಳಿಯನನ್ನು ಕಣ್ತುಂಬಿಕೊಂಡಿದ್ದಾರೆ.
ಶನಿವಾರ ತಮ್ಮ ಹುಟ್ಟೂರು ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಕಾರ್ತಿಕ್ ಅಲ್ಲಿಯೂ ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದರು. ಅಣ್ಣಾವ್ರು ಹುಟ್ಟಿದ್ದು ಇದೇ ಚಾಮರಾಜನಗರ ಜಿಲ್ಲೆ, ಅದೇ ನನಗೆ ಹೆಮ್ಮೆ. ನಾನೂ ಈ ನೆಲದಲ್ಲಿ ಹುಟ್ಟಿದ್ದೇನೆ. ಟ್ರೋಫಿ ಗೆದ್ದರೂ ಒಂದು ಕೊರತೆ ಇದೆ. ಗೆದ್ದ ತಕ್ಷಣ ಅಪ್ಪು ಸರ್ ಅವರ ಆಶೀರ್ವಾದ ಪಡೆಯಬೇಕಿತ್ತು. ಅದು ನನಗೆ ಸಾಧ್ಯವಾಗಲ್ಲಿಲ್ಲ. ಈ ವಿಚಾರ ಬೇಸರ ತಂದಿದೆ ಎಂದು ಕಾರ್ತಿಕ್ ನೆನಪಿಸಿಕೊಂಡಿದ್ದರು.
ಅಲ್ಲಿ ಬಿಗ್ ಬಾಸ್ ಕನ್ನಡ ಸೀಜನ್ 10 ಸ್ಪರ್ಧೆಯ ಗೆಲುವಿನ ಬಗ್ಗೆ ಮಾತನಾಡಿದ ಅವರು, ನನ್ನ ಗೆಲುವಿಗೆ ಚಾಮರಾಜನಗರ ಜಿಲ್ಲೆ ಸೇರಿದಂತೆ ಇಡೀ ಕರ್ನಾಟಕದ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಈ ಬಾರಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದ ಎಲ್ಲರೂ ಗೆದ್ದಿದ್ದೇವೆ. ನಮ್ಮ ವ್ಯಕ್ತಿತ್ವವನ್ನು ಬಿಗ್ ಬಾಸ್ ವೇದಿಕೆ ಹಾಗೂ ಸುದೀಪ್ ಹೊರ ತಂದಿದ್ದಾರೆ ಎಂದು ಹೇಳಿದರು. ತಂಗಿಯಿಂದ ಗೆದ್ದೆ ಅಂದವರಿಗೆ ಹೌದೂ ಹಾಗೆ ಅಂದುಕೊಳ್ಳಿ ಅದು ಕೂಡ ನನಗೆ ಸಂತೋಷ ನೀಡುತ್ತದೆ ಎಂದಿದ್ದಾರೆ.
ಬಿಗ್ ಬಾಸ್ ನಲ್ಲಿ ಏನೇ ನಡೆದಿದ್ದರೂ ಎಲ್ಲರ ಜೊತೆ ಫ್ರೆಂಡ್‌ಶಿಪ್ ಬೆಳೆಸಿಕೊಳ್ಳುತ್ತೇನೆ. ನನಗೆ ಸಾಕಷ್ಟು ಆಫರ್‌ಗಳು ಬಂದಿದೆ. ಕಥೆ ನೋಡಿ ಆಯ್ಕೆ ಮಾಡಬೇಕಾಗಿದೆ. ಜನರು ನನಗೆ ಹೆಚ್ಚು ಮತ ನೀಡಿ ಹೆಚ್ಚಿನ ಜವಾಬ್ದಾರಿ ನನ್ನ ಮೇಲೆ ಹಾಕಿದ್ದಾರೆ. ನನಗೆ ಯಾವುದೇ ನೆಗಿಟಿವ್ ಟ್ರೋಲ್ ಆಗಿಲ್ಲ, ಮಾಡಿದವರು ಮಾಡಲಿ ನನ್ನ ಕೆಲಸ ಮಾಡುತ್ತೇನೆ. ಬಿಗ್ ಬಾಸ್ ಒಂದು ದೊಡ್ಡ ವೇದಿಕೆ. ಎಲ್ಲರ ವ್ಯಕ್ತಿತ್ವವನ್ನು ಹೊರತರುವ ರಿಯಾಲಿಟಿ ಶೋ ಅದಾಗಿದೆ. ನಾವು ಯಾರೂ ಪಾತ್ರ ಮಾಡಲಿಲ್ಲ, ನಮ್ಮ ವ್ಯಕ್ತಿತ್ವ ಹೊರ ಹಾಕಿದೆವು ಎಂದು ತಿಳಿಸಿದರು.