ವರ್ತೂರು ಸಂತೋಷ್ ಹಾಗೂ ತನಿಷಾ ನಡುವಿನ ಸಂಬಂಧ ಬಿಚ್ಚಿಟ್ಟ ರಕ್ಷಕ್ ಬುಲೆಟ್
ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ರಕ್ಷಕ್ ಬುಲೆಟ್ ಎಲಿಮಿನೇಟ್ ಆಗಿ ಹೊರ ಬರುತ್ತಿದ್ದಂತೆ ಒಂದಾದ ಮೆಲ್ಲೊಂದು ಬುಲೆಟ್ ಫಯರ್ ಮಾಡುತ್ತಿದ್ದಾರೆ. ಎಲಿಮಿನೇಷನ್, ನಾಮಿನೇಷನ್ ಮತ್ತು ಗೇಮ್ ಬಗ್ಗೆ ಮಾತನಾಡುತ್ತಿರುವ ರಕ್ಷಕ್ ಈಗ ಸಿಹಿ ಸುದ್ದಿವೊಂದನ್ನು ಜನರ ಜೊತೆ ಹಂಚಿಕೊಂಡಿದ್ದಾರೆ.
ವರ್ತೂರ್ ಸಂತೋಷ್ ನನ್ನ ಜೊತೆ ಚೆನ್ನಾಗಿದ್ದರು. ಅವರಿಗೆ ಒಳ್ಳೆಯದಾಗಲಿ. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮುಂದಿನ ದಿನಗಳಲ್ಲಿ ಅವರ ನಿಶ್ಚಿತಾರ್ಥ ನಡೆಯಲಿದೆ. ಹೊರಗಡೆ ಅವರಿಗೆ ಅಂತ ಹುಡುಗಿ ಇದ್ದಾರೆ. ಸುಮ್ಮನೆ ಗಾಸಿಪ್ ಮಾಡುತ್ತಾರೆ ಜನರು. ಬಿಗ್ ಬಾಸ್ ಮನೆಯಲ್ಲಿದ್ದಾಗ ನಾನು ತುಕಾಲಿ ಅವರು ತಮಾಷೆಗೆ ಬೆಂಕಿ ಅಂತ ತನಿಷಾ ಜೊತೆ ರೇಗಿಸುತ್ತಿದ್ವಿ.
ಪಾಪ ಅವರ ಜೀವನ ಡ್ಯಾಮೇಜ್ ಆಗಬಾರದು. ಕೆಲವೊಮ್ಮೆ ನಾವು ಕಾಮಿಡಿ ಮಾಡಬಹುದು ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ರಬ್ ಮಾಡಿದರೆ ಒಬ್ಬರ ಲೈಫ್ ಹಾಳಾಗುತ್ತೆ. 100 ದಿನ ಮಾತ್ರ ಲೈಫ್ ಅಲ್ಲ 100 ದಿನ ಬಿಟ್ಟಿ ಹೊರಗಡೆ ಒಂದು ಲೈಫ್ ಇದೆ ಅದನ್ನು ಹಾಳು ಮಾಡುವುದು ಬೇಡ ಎಂದು ರಕ್ಷಕ್ ಬುಲೆಟ್ ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವುದು ಕಾಮಿಡಿ ಅಷ್ಟೆ. ಸಂತೋಷ್ ಮದುವೆಯಾಗುತ್ತಿರುವ ಹುಡುಗಿ ನೋಡುತ್ತಿದ್ದರೆ…ದಯವಿಟ್ಟು ಕ್ಷಮಿಸಿ ಕಾಮಿಡಿಗೋಸ್ಕರ ನಾವು ರೇಗಿಸಿಕೊಂಡು ಮಾತನಾಡುತ್ತಿದೆವು. ತನಿಷಾ ತೊಡೆ ಮೇಲೆ ಸಂತೋಷ್ ಮಲಗಿಕೊಂಡಾಗ ಅಥವಾ ಸಂತೋಷ್ ತೊಡೆ ಮೇಲೆ ತನಿಷಾ ಕುಳಿತುಕೊಂಡಾಗ ಅದು ಹೊರಗಡೆ ಮತ್ತೊಂದು ರೀತಿ ಕಾಣಿಸುತ್ತದೆ.
ತಪ್ಪಾಗಿ ತಿಳಿದುಕೊಳ್ಳುತ್ತಾರೆಂದು ನಾನೇ ವರ್ತೂರ್ ಅವರಿಗೆ ಹಲವು ಸಲ ಹೇಳಿದ್ದೀನಿ. ವೀಕೆಂಡ್‌ನಲ್ಲಿ ನಡೆದ ಬೆಂಕಿಯ ಬಲೆ ಸಿನಿಮಾ ಪೋಸ್ಟ್ ವೈರಲ್ ಆಯ್ತು ವೀಕೆಂಡ್‌ನಲ್ಲಿ ಡ್ಯಾನ್ಸ್ ಮಾಡಿದರೂ ಅದು ವೈರಲ್ ಆಗಿರುತ್ತದೆ. ಒಳ್ಳೆಯದಾಗಲಿ ಎಂದು ರಕ್ಷಕ್ ಬುಲೆಟ್ ಹೇಳಿದ್ದಾರೆ. ಹುಲಿ ಉಗುರು ವಿಚಾರ ದೊಡ್ಡದಾದ ಮೇಲೆ ವರ್ತೂರ್ ಸಂತೋಷ್ ಮೇಲೆ ಜನರ ಗಮನ ಸೆಳೆದಿದೆ.
ವರ್ತೂರ್ ಹಾಕು ಸಣ್ಣ ಪುಟ್ಟ ಒಡವೆ ಕೂಡ ಟ್ರೆಂಡ್ ಆಗುತ್ತಿದೆ. ಅಲ್ಲದೆ ಈ ವಾರ ಅತಿ ಹೆಚ್ಚು ವೋಟ್ ಪಡೆದು ವರ್ತೂರ್ ಸೇಫ್ ಆಗಿದ್ದಾರೆ. ಇನ್ನು ಎರಡು ಮೂರು ವಾರ ಸೇಫ್ ಗೇಮ್ ಆಡಲು ಮೋಸವಿಲ್ಲ ಅಂತಾರೆ ವೀಕ್ಷಕರು.