• Uncategorised

ಸೀರಿಯಲ್ ನಿಂದ ಹೊರನಡೆದ ಜಾಹ್ನವಿ! ಕಣ್ಣೀ ರಿಟ್ಟ ವೀಕ್ಷಕರು

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿಯಾಗಿ ಮಿಂಚುತ್ತಿರುವ ಚಂದನ ಅನಂತಕೃಷ್ಣ ಇದೀಗ ಭಾವ ತೀರ ಯಾನದ ಮೂಲಕ ಸ್ಯಾಂಡಲ್ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ದಿದ್ದಾರೆ. ಹೌದು ಕಿರುತೆರೆ ನಟಿಯಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ, ಗಾಯಕಿಯಾಗಿ, ಡ್ಯಾನ್ಸರ್ ಆಗಿ, ನಿರೂಪಕಿಯೂ ಆಗಿ ಗುರುತಿಸಿಕೊಂಡಿರುವ ನಟಿ ಚಂದನಾ ಅನಂತಕೃಷ್ಣ ಇದೀಗ ಹೊಸ ಹೆಜ್ಜೆಯನ್ನಿಡುತ್ತಿದ್ದು, ಕಿರುತೆರೆಯಿಂದ ಹಿರಿತೆರೆಗೆ ಲಗ್ಗೆ ಇಟ್ಟಿದ್ದಾರೆ. 

ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಲಕ್ಷ್ಮೀ ಮತ್ತು ಶ್ರೀನಿವಾಸರ ಕಿರಿಯ ಮಗಳು ಮತ್ತು ಜಯಂತ್ ನ ಪತ್ನಿ ಜಾಹ್ನವಿಯಾಗಿ ಅದ್ಭುತವಾಗಿ ನಟಿಸುತ್ತಿರುವ ಚಂದನಾ ತಮ್ಮ ಸ್ಯಾಂಡಲ್ ವುಡ್ ಡೆಬ್ಯೂಗೆ ರೆಡಿಯಾಗ್ತಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಮಿಂಚಿದ ಇವರು ಹಿರಿ ತೆರೆಗೆ ಪಯಣ ಬೆಳೆಸುತ್ತಿದ್ದಾರೆ.

ಕನ್ನಡದ ಶಾಖಾಹಾರಿ ಚಿತ್ರಕ್ಕೆ ಸಂಗೀತ ನೀಡಿದ್ದ ಮಯೂರ ಅಂಬೇಕಲ್ಲು ಹಾಗೂ ಅವರ ಸ್ನೇಹಿತ ತೇಜಸ್‌ ಕಿರಣ್‌ ಜೊತೆ ಸೇರಿ ಹೊಸ ಸಿನಿಮಾ ನಿರ್ದೇಶಿಸುತ್ತಿದ್ದು, ಈ ಸಿನಿಮಾಕ್ಕೆ ಭಾವ ತೀರ ಯಾನ ಎಂಬ ಟೈಟಲ್‌ ಇಡಲಾಗಿದೆ. ಯುವ ಪ್ರತಿಭೆಗಳೇ ಸೇರಿ ಮಾಡಿದ ಚಿತ್ರದಲ್ಲಿ ನಟಿ ಚಂದನಾ ಅನಂತಕೃಷ್ಣ ನಟಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಸಿನಿಮಾದಲ್ಲಿನ ಚಂದನಾ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಸಿನಿಮಾದಲ್ಲಿ ಧೃತಿ ಎಂಬ ಪಾತ್ರದಲ್ಲಿ  ಚಂದನಾ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರದ ಶೂಟಿಂಗ್ ಇರುವ ಕಾರಣ ಇವರು ಧಾರವಾಹಿಯನ್ನು ಬಿಡಲಿದ್ದಾರೆ. ಇವರ ಪಾತ್ರಕ್ಕೆ ಬೇರೊಬ್ಬ ನಟಿ ಬರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತಾಗಿ ಚಂದನಾ ಯಾವುದೇ ಹೇಳಿಕೆ ನೀಡಿಲ್ಲ.

You may also like...