ಹೊಸ ಜೀವನಕ್ಕೆ ಕಾಲಿಟ್ಟ ಸುಶ್ಮಿತಾ ಜಗ್ಗಪ್ಪ, ಮೊದಲ ರಾತ್ರಿ ಯಾವ ದೇಶದಲ್ಲಿ ಗೊ.ತ್ತಾ

ಎಲ್ಲರನ್ನೂ ನಗಿಸುವುದು ಸುಲಭದ ಮಾತಲ್ಲ. ಆದರೆ ಈ ಜೋಡಿ ಎಲ್ಲರನ್ನೂ ನಗಿಸುತ್ತಲೆ ಒಂದಾಗಿದ್ದಾರೆ. ಹೌದು
ಕಾಮಿಡಿ ಶೋ ಮೂಲಕ ವೀಕ್ಷಕರ ಮನಗೆದ್ದ ಜಗ್ಗಪ್ಪ ಪ್ರೀತಿಸಿದ ಹುಡುಗಿಯ ಜೊತೆ ಹಸೆಮಣೆಯೇರುತ್ತಿದ್ದಾರೆ. ಜನಪ್ರಿಯ ಕಾಮಿಡಿ ಶೋಗಳಾದ ಗಿಚ್ಚಿ ಗಿಲಿಗಿಲಿ, ಮಜಾ ಭಾರತ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗಿಯಾಗಿದ್ದ ನಟಿ ಸುಷ್ಮಿತಾ ಮತ್ತು ಜಗ್ಗಪ್ಪ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜನಪ್ರಿಯ ಕಾಮಿಡಿ ಶೋಗಳಾದ ಗಿಚ್ಚಿ ಗಿಲಿಗಿಲಿ , ಮಜಾ ಭಾರತ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗಿಯಾಗಿದ್ದ ನಟಿ ಸುಷ್ಮಿತಾ ಮತ್ತು ಜಗ್ಗಪ್ಪ ವಿವಾಹವಾಗಿದ್ದಾರೆ. ಜೊತೆಯಾಗಿಯೇ ಹಲವಾರು ಶೋಗಳಲ್ಲಿ ಈ ಜೋಡಿ ಭಾಗಿಯಾಗಿದ್ದು, ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಪಾತ್ರ ನಿರ್ವಹಿಸಿದ್ದಾರೆ.

ಹಲವು ದಿನಗಳಿಂದ ಜಗ್ಗಪ್ಪ ಮತ್ತು ಸುಷ್ಮಿತಾ ಲವ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಇತ್ತು. ಆದರೆ, ಈ ಜೋಡಿ ಅದನ್ನು ಅಲ್ಲಗಳೆಯುತ್ತಲೇ ಬಂದರು.ಕಾಮಿಡಿ ಶೋಗಳಲ್ಲಿ ಅನೇಕ ಬಾರಿ ಗಂಡ ಹೆಂಡತಿ ಪಾತ್ರ ಮಾಡುತ್ತಾ ಬಂದಿರುವುದರಿಂದ ಜನರು ಆ ರೀತಿಯಲ್ಲಿ ತಿಳಿದುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ಇದೀಗ ಜಗ್ಗಪ್ಪನ ಜೊತೆಯೇ ಸುಷ್ಮಿತಾ ಹಸೆ ಮಣೆ ಏರಿದ್ದಾರೆ.

ಬೆಂಗಳೂರಿನ ಜೆಪಿ ನಗರದ ಸಿಂಧು ಕನ್ವೆನ್ಷನ್ ಸೆಂಟರ್ನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದೆ. ಈ ಜೋಡಿಯ ಮದುವೆಗೆ ಕಿರುತೆರೆಯ ಹಲವು ತಾರೆಗಳು ಆಗಮಿಸಿ ಶುಭಾಶಯ ಕೋರಿದ್ದಾರೆ. ನಿರಂಜನ್ ದೇಶಪಾಂಡೆ, ಪಾವಗಡ ಮಂಜು, ಇನ್ನೂ ಕೆಲವರು ಆಗಮಿಸಿದ್ದರು. ಅದರ ಜೊತೆಗೆ ನಟ ರವಿಚಂದ್ರನ್, ಪ್ರಜ್ವಲ್ ದೇವರಾಜ್ ಇನ್ನೂ ಕೆಲವು ಸಿನಿಮಾ ತಾರೆಯರು ಆಗಮಿಸಿ ಹರಿಸಿದ್ದಾರೆ.

You may also like...