• Uncategorised

ಅರ್ಜುನ್ ಅವತ್ತು ಮಾಡಿದ ತಪ್ಪೇನು ಗೊ.ತ್ತಾ, ಪಳಗಿಸಿದ ಮಾವುತನನ್ನು ಕೊಂ.ದಿದ್ದು ನಿಜಾನಾ

ಬಲಾಢ್ಯನಾಗಿ, ಮೈಸೂರು ದಸರಾ ಆಕರ್ಷಣೆಯಾಗಿ ಹುಲಿ, ಕಾಡಾನೆಗಳ ಕಾರ್ಯಾಚರಣೆಯಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದ ಸಾಕಾನೆ ಅರ್ಜುನನ ವೀರ ಮರಣದ ನಂತರ ಜನವಲಯದಲ್ಲಿ ಹೆಚ್ಚು, ಹೆಚ್ಚು ನೆನಪುಗಳನ್ನು ಬಿಟ್ಟು ಹೋಗುತ್ತಿದ್ದಾನೆ. ಆದರೆ ಜನ ಮಾತ್ರ ಅರ್ಜುನನ ಸಾವು ನ್ಯಾಯವೇ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಅರ್ಜುನನ ಸಾವಿನ ಬಳಿಕ ಜನ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಂಜಾಗ್ರತೆ ವಹಿಸಿದ್ದರೆ ಅರ್ಜುನ ಸಾವನ್ನಪ್ಪುತ್ತಿರಲಿಲ್ಲ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು 64 ವರ್ಷದ ಅರ್ಜುನನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಂಡಿದ್ದೇ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗ ಕಾಲ ಮಿಂಚಿ ಹೋಗಿದೆ. ತನ್ನ ಬದುಕಿನ ಕೊನೆಯ ಕ್ಷಣಗಳಲ್ಲಿಯೂ ಕಾಡಾನೆ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಮೂಲಕ ಜನರಲ್ಲಿ ನೆನಪುಗಳನ್ನು ಹಸಿರಾಗಿಸಿ ಹೋಗಿದ್ದಾನೆ. ಆದರೆ ಇಂತಹದೊಂದು ದುರಂತ ಸಾವು ಮುಂದೆ ಯಾವ ಸಾಕಾನೆಗಳಿಗೂ ಬಾರದಿರಲಿ ಮತ್ತು ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ ಎಂದಷ್ಟೇ ನಾವು ಹೇಳಬಹುದಾಗಿದೆ.

ಅರ್ಜುನ ದೃಢಕಾಯನಾಗಿದ್ದ, ತನ್ನ ಯೌವನದ ದಿನಗಳಲ್ಲಿ ಕಾಡಾನೆಗಳನ್ನು ಸದೆಬಡಿಯುವಲ್ಲಿ ನಿಸ್ಸೀಮನಾಗಿದ್ದ. ಆದರೆ ಒಬ್ಬ ಮಾವುತನ ಸಾವಿಗೆ ಈತ ಕಾರಣನಾಗಿದ್ದ ಎಂಬ ಕಪ್ಪು ಚುಕ್ಕಿಯೂ ಈತನ ಮೇಲಿದೆ. 2012ರಿಂದ ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆಯಾಗಿ ಕಾರ್ಯ ಆರಂಭಿಸಿ 2019ರವರೆಗೆ ಅಂಬಾರಿ ಹೊತ್ತಿದ್ದಾನೆ. ಆದರೆ ಅದಕ್ಕೂ ಮುನ್ನ 90ರ ದಶಕದಲ್ಲಿಯೇ ಒಮ್ಮೆ ಯಶಸ್ವಿಯಾಗಿ ಅಂಬಾರಿ ಹೊತ್ತು ನಡೆದಿದ್ದ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ಇದನ್ನು ಪರಿಗಣಿಸಿದರೆ ಅರ್ಜುನ ಅಂಬಾರಿ ಹೊತ್ತಿದ್ದು ಒಂಬತ್ತು ಬಾರಿ. ಅದೊಂದು ಘಟನೆಯಿಂದಾಗಿ ಅರ್ಜುನನಿಗೆ ಅಂಬಾರಿ ಹೊರುವುದರಿಂದ ಹೊರಗಿಡಲಾಯಿತು. ಆ ಘಟನೆ ಯಾವುದು ಎಂಬುದನ್ನು ಹೇಳಲೇ ಬೇಕಾಗುತ್ತದೆ. ಹಲವು ವರ್ಷಗಳ ಹಿಂದೆ ಗಜಮಜ್ಜನಕ್ಕೆ ಕಾರಂಜಿ ಕೆರೆಗೆ ತೆರಳಿ ಅಲ್ಲಿ ಮಜ್ಜನ ಮುಗಿಸಿ ಕೆರೆಯಿಂದ ಮೇಲೆ ಹತ್ತುವಾಗ ಅರ್ಜುನನ ಮುಂದೆ ಹೋಗುತ್ತಿದ್ದ ಆನೆಯೊಂದರ ಕಾವಡಿ ಜಾರಿ ಕೆಳಗೆ ಬಿದ್ದನು. ಅದೇ ಸಂದರ್ಭ ನೀರಿನಿಂದ ಮೇಲೆ ಬಂದ ಅರ್ಜುನನ ಕಾಲಿಗೆ ಆತ ಆಕಸ್ಮಿಕವಾಗಿ ಸಿಕ್ಕಿ ಸಾವನ್ನಪ್ಪಿದ್ದನು. ಈ ದುರ್ಘಟನೆ ಆಕಸ್ಮಿಕವಾದರೂ ಅರ್ಜುನನಿಗೆ ಅವತ್ತು ಕಪ್ಪು ಚುಕ್ಕೆಯಾಯಿತು.

ಅರ್ಜುನ ತನ್ನ ಸಹವರ್ತಿ ಅಭಿಮನ್ಯುವಿನೊಂದಿಗೆ ಸೇರಿ ಹಲವು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾನೆ. ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ಆನೆಗಳನ್ನು ಹಿಡಿಯಲು ಬಳಸಿರುವುದು ಶೌರ್ಯಕ್ಕೆ ಸಾಕ್ಷಿ. ಈ ಫೈಟರ್ ಎಂತಹ ಕಾಡುಪ್ರಾಣಿಯನ್ನಾದರೂ ಹುಡುಕಿ ಸದ್ದಡಗಿಸುವುದರಲ್ಲಿ ನಿಸ್ಸೀಮನಾಗಿದ್ದನು. ಕೊನೆಗೂ ಕಾರ್ಯಾಚರಣೆ ಮಾಡುವಾಗಲೇ ಸಾವನ್ನಪ್ಪಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.

You may also like...