• Uncategorised

ಕಿಚ್ಚ ಸುದೀಪ್ ಅವರನ್ನು ಮೀರಿಸುವಷ್ಟು ಆಸ್ತಿ ಮಾಡಿರುವ ವರ್ತೂರು ಸಂತು, ಎಷ್ಟು ಕೋರ್ಟ್ ಗೊ.ತ್ತಾ

ಹಳ್ಳಿಕಾರ್ ತಳಿಯ ಜಾನುವಾರು ಸಾಕಾಣಿಕೆಯಿಂದ ಜನಪ್ರಿಯತೆ ಪಡೆದಿರುವ ವರ್ತೂರ್ ಸಂತೋಷ್ ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಇವರಿಗೆ ಹಳ್ಳಿಕಾರ ಒಡೆಯ ಅಂತಲೇ ಕರೆಯಲಾಗುತ್ತೆ. .ಇಲ್ಲಿ ವರ್ತೂರು ಸಂತೋಷ್ ಆಸ್ತಿ, ಆದಾಯದ ಮೂಲ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಿ.

ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹಳ್ಳಿಕಾರ್ ಒಡೆಯ ಅಂತಲೇ ಪ್ರಸಿದ್ಧಿ ಪಡೆದಿದ್ದಾರೆ. ಇವರ ಕುಟುಂಬ ವ್ಯವಸಾಯದ ಮೇಲೆ ಆಧಾರಿತವಾಗಿದ್ದು, ಹೂವು, ಟ್ಯೂಮೆಟೋ ಸೇರಿದಂತೆ ಕೆಲ ತರಕಾರಿಗಳನ್ನು ಬೆಳೆಯುತ್ತಾರೆ. ಸಂತೋಷ್ ಊರಿನ ಹೆಸರು ವರ್ತೂರು. ಇವರದ್ದು ಸಂತೆ ಸುಂಕ ಎತ್ತುವ ಕುಟುಂಬವಂತೆ.

ಇವರದ್ದು ದೊಡ್ಡ ಕುಟುಂಬವಾಗಿದ್ದು, 38 ಎಕರೆ ಆಸ್ತಿ ಇದೆ ಇದೆಲ್ಲವೂ ಅಜ್ಜ ಮತ್ತು ತಂದೆಯ ಕೊಡುಗೆ ಎಂದು ಹಿಂದೊಮ್ಮೆ ಅವರೇ ಖುದ್ದಾಗಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ವರ್ತೂರು ಸಂತೋಷ್ ಬಾಲ್ಯ ಶಿಕ್ಷಣವನ್ನೆಲ್ಲಾ ಇಂಗ್ಲಿಷ್‌ ಮೀಡಿಯಂನಲ್ಲೇ ಓದಿದ್ದಾರೆ. ಎಂಬಿಎ ವರೆಗೂ ಓದಿರುವ ಅವರು, ಎಂಬಿಎ ಯನ್ನು ಪೂರ್ಣಗೊಳಿಸಿಲ್ಲ. ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. 9 ನೆ ತರಗತಿಯ ನಂತರ ಸಂತೋಷ್ ಅವರ ಅವಿಭಕ್ತ ಕುಟುಂಬ ಭಾಗವಾಗಿತ್ತು.

ಆಗ ಸಂತೋಷ್‌ಗೆ 15 ಎಕರೆ ಜಮೀನು ಬಂದಿದೆ. ದೊಡ್ಮನೆ ಗೆ ಬರುವಾಗ ಅವರ ಮೈಮೇಲೆ 400 ಗ್ರಾಂ ಚಿನ್ನವಿದ್ದು, ಮನೆಯಲ್ಲಿ ಇನ್ನೂ ಚಿನ್ನವಿದೆ ಅಂತ ಅವರು ಹೇಳಿದ್ದರು. ಸದ್ಯ ವರ್ತೂರು ಸಂತೋಷ್ ಅವರು ಅಪಾರ್ಟ್‌ಮೆಂಟ್ ಕಟ್ಟಿ, ಕಮರ್ಶಿಯಲ್ ಮಾಡಿಕೊಂಡು ಅದರ ಬಾಡಿಗೆಯನ್ನು ಪಡೆದು ಸಹ ಜೀವನ ನಡೆಸುತ್ತಿದ್ದಾರೆ. ಮುಳುಬಾಗಿಲಿನಲ್ಲಿ ಕೂಡ 15 ಎಕರೆ ಆಸ್ತಿ ಮಾಡಿದ್ದಾರೆ.

ಅಲ್ಲಿಯೇ 3 ಕೋಟಿ ರೂಪಾಯಿ ಖರ್ಚು ಮಾಡಿ ಒಂದು ಫಾಮ್‌ಹೌಸ್ ಕೂಡ ಕಟ್ಟಿದ್ದಾರೆ. ವರ್ತೂರು ಸಂತೋಷ್ ಅವರ ಅಜ್ಜನಿಗೆ 5 ಜನ ಮಕ್ಕಳು. ಈ ಪೈಕಿ ಸಂತೋಷ್ ತಂದೆ ಕೊನೆಯವರು. ಆದರೆ, ಅವರು ಚಿಕ್ಕವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಸದ್ಯ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದಾರೆ.

ಸಂತೋಷ್‌ ತಮ್ಮ ಊರಿನಲ್ಲಿ ಕೋಟಿ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾದ ಮನೆಯೊಂದನ್ನು ಸಹ ಕಟ್ಟಿಸಿದ್ದಾರೆ.

You may also like...