• Uncategorised

ಕ್ಯಾಮರಾ ಹಿಂದೆ ನಡೆಯುತ್ತದೆ ಇಲ್ಲ ಸಲ್ಲದ ವ್ಯವಹಾರ, ಬಿಗ್ ಬಾಸ್ ಮತ್ತೊಂದು ಮುಖ

ಭಾರತೀಯ ಕಿರುತೆರೆಯಲ್ಲಿ ವಿವಿಧ ರೀತಿಯ ರಿಯಾಲಿಟಿ ಶೋಗಳಿದ್ದರೂ ಕೂಡ ಅದರಲ್ಲಿ ಹೆಚ್ಚು ಟಿಆರ್‌ಪಿ ಬರೋದು, ಜನರ ಕಣ್ಣು ಸಾಗೋದು ಬಿಗ್ ಬಾಸ್‌ನತ್ತ. ಬಿಗ್ ಬಾಸ್‌ನ್ನು ಎಷ್ಟು ಜನರು ಇಷ್ಟಪಡ್ತಾರೋ ಅಷ್ಟೇ ಬೈಯ್ಯೋರು ಇದ್ದಾರೆ. ಯಾರು ಏನೇ ಹೇಳಲಿ ಸ್ವಾಮಿ! ಬಿಗ್ ಬಾಸ್ ಭಾರೀ ಡಿಮ್ಯಾಂಡ್‌ನಲ್ಲಿದೆ. ಹಾಗಿದ್ರೆ ಜನರು ಯಾಕೆ ಬಿಗ್ ಬಾಸ್ ನೋಡ್ತಾರೆ? ಅದರಲ್ಲಿ ಅಂಥ ವಿಷಯಗಳು ಏನಿವೆ?

ಬಿಗ್ ಬಾಸ್ ಎನ್ನೋದು ಭಾರತೀಯ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ರಿಯಾಲಿಟಿ ಶೋ. ಏನೇ ಇರಲಿ, ಯಾವುದೇ ಇರಲಿ ಒಳ್ಳೆಯದು ಇರುತ್ತದೆ, ಕೆಟ್ಟದ್ದು ಇರುತ್ತದೆ, ನಾವು ಅದನ್ನು ಹೇಗೆ ಸ್ವೀಕಾರ ಮಾಡ್ತೀವಿ ಅನ್ನೋದರ ಮೇಲೆ ಆಧಾರಿತವಾಗಿರುತ್ತದೆ. ಹಾಗೆಯೇ ಬಿಗ್ ಬಾಸ್ ಶೋನಿಂದ ಯಾರು ಏನು ಸ್ವೀಕಾರ ಮಾಡ್ತಾರೆ ಎನ್ನೋದು ಅವರಿಗೆ ಬಿಟ್ಟ ವಿಚಾರ.

ಬಿಗ್ ಬ್ರದರ್ ಎನ್ನುವ ಡಚ್ ರಿಯಾಲಿಟಿ ಶೋವನ್ನು ಆಧರಿಸಿ ಭಾರತದಲ್ಲಿ ಬಿಗ್ ಬಾಸ್ ಶೋ ಆರಂಭ ಮಾಡಲಾಯ್ತು. ಆರಂಭದಲ್ಲಿ ಹಿಂದಿ ಭಾಷೆಯಲ್ಲಿ ಮೊದಲು ಬಿಗ್ ಬಾಸ್ ಆರಂಭವಾಯ್ತು. ಆ ನಂತರ ಕನ್ನಡ, ಬಂಗಾಳಿ, ತಮಿಳು, ತೆಲುಗು, ಮರಾಠಿ, ಮಲಯಾಳಂ ಭಾಷೆಗಳಲ್ಲಿ ಬಿಗ್ ಬಾಸ್ ಸೀಸನ್ ಬರಲು ಶುರುವಾಯ್ತು.2006ರಲ್ಲಿ ಬಿಗ್ ಬಾಸ್ ಶುರುವಾದಾಗ ಅರ್ಷದ್ ವಾರ್ಸಿ ಅವರು ಮೊದಲು ನಿರೂಪಣೆ ಮಾಡಿದ್ದರು. ಆಮೇಲೆ ಶಿಲ್ಪಾ ಶೆಟ್ಟಿ, ಅಮಿತಾಭ್ ಬಚ್ಚನ್ ನಿರೂಪಣೆ ಮಾಡಿದ ನಂತರ ಈಗ ಸಲ್ಮಾನ್ ಖಾನ್ ಅವರೇ ದಶಕಗಳಿಂದ ಈ ಶೋವನ್ನು ನಿರೂಪಣೆ ಮಾಡುತ್ತಿದ್ದಾರೆ.

ಕನ್ನಡದಲ್ಲಿ 2013ರಲ್ಲಿ ಬಿಗ್ ಬಾಸ್ ಆರಂಭ ಆಯಿತು. ಈವರೆಗೆ 9 ಸೀಸನ್ ಪೂರ್ಣಗೊಂಡಿದ್ದು ಅಕ್ಟೋಬರ್ 8ರಂದು 10ನೇ ಸೀಸನ್ಗೆ ಅದ್ದೂರಿ ಚಾಲನೆ ನೀಡಿದ್ದಾರೆ. ಫ್ರಾನ್ಸ್ನಲ್ಲಿ ‘ಲಾಫ್ಟ್ ಸ್ಟೋರಿ’ ಮತ್ತು ‘ಸೀಕ್ರೆಟ್ ಸ್ಟೋರಿ’ ಎಂಬ ಹೆಸರಲ್ಲಿ ಬಿಗ್ ಬ್ರದರ್ ಶೋ ನಡೆಯುತ್ತದೆ. ಹಾಗೆಯೇ ಬೇರೆ ಬೇರೆ ಪ್ರದೇಶಗಳಲ್ಲಿ ಈ ಶೋಗೆ ಭಿನ್ನವಾದ ಹೆಸರುಗಳು ಇವೆ. ಮೊದಲ ಸೀಸನ್: ವಿಜಯ್ ರಾಘವೇಂದ್ರ.ಎರಡನೇ ಸೀಸನ್: ಅಕುಲ್ ಬಾಲಾಜಿ.ಮೂರನೇ ಸೀಸನ್: ಶ್ರುತಿ.ನಾಲ್ಕನೇ ಸೀಸನ್: ಪ್ರಥಮ್.ಐದನೇ ಸೀಸನ್: ಚಂದನ್ ಶೆಟ್ಟಿ.ಆರನೇ ಸೀಸನ್: ಶಶಿ ಕುಮಾರ್.ಏಳನೇ ಸೀಸನ್: ಶೈನ್ ಶೆಟ್ಟಿ.ಎಂಟನೇ ಸೀಸನ್: ಮಂಜು ಪಾವಗಡ.ಒಂಭತ್ತನೇ ಸೀಸನ್: ರೂಪೇಶ್ ಶೆಟ್ಟಿ.

ಕನ್ನಡದಲ್ಲಿ ಎಲ್ಲ 9 ಸೀಸನ್ಗಳನ್ನು ನಟ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಿದ್ದಾರೆ. 10 ನೆಯ ಸೀಸನ್ ಕೂಡ ಅವರೇ ನಿರೂಪಣೆ ಮಾಡುತ್ತಿದ್ದಾರೆ .ಭಾರತದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಸಖತ್ ಫೇಮಸ್ ಆಗಿದೆ. ದಿನದಿಂದ ದಿನಕ್ಕೆ ಇದರ ಬಿಸ್ನೆಸ್ ಹೆಚ್ಚುತ್ತಿದೆ. ಸಾಕಷ್ಟು ಅದ್ದೂರಿಯಾಗಿ ಕಾರ್ಯಕ್ರಮ ಮೂಡಿಬರುತ್ತಿದೆ. ಕೋಟ್ಯಂತರ ರೂಪಾಯಿ ಬಜೆಟ್ನಲ್ಲಿ ಇದು ನಿರ್ಮಾಣ ಆಗುತ್ತದೆ. ಈ ಬಾರಿ ಕನ್ನಡದಲ್ಲಿ ಹೊಸದಾಗಿ ಬಿಗ್ ಬಾಸ್ ಮನೆ ನಿರ್ಮಾಣ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಗ್ಬಾಸ್ ಸೀಸನ್ 10ರ ವಿಜಯಿ ಯಾರು ಎಂದು ಕೂಡ ಹೇಳಲಾಗುತ್ತಿದೆ.

You may also like...