• Uncategorised

ಗಂಡನನ್ನು ಬಿಟ್ಟು ಸ್ವಾಮೀಜಿ ಹಿಂದೆ ಬಂದ ಮುದ್ದಾದ ಸುಂದರಿ, ಮ.ಜಾ ಮಾಡಿ ಎಲ್ಲವೂ ಮುಗಿಸಿದ ಸ್ವಾಮಿ

ಜನರ ತಲೆಗೆ ಹುಳಬಿಟ್ಟ ಕೇಸ್ ಎಂದು ಕರೆಸಿಕಳ್ಳುತ್ತಿರುವ ಅಂತ್ಯಂತ ರೋಚಕ ಕೇಸ್ ಇದು. ಸ್ವಾಮಿ ಶ್ರದ್ಧಾನಂದನ ನೈಜ ಹೆಸರು ಮುರಳಿ ಮನೋಹರ್ ಮಿಶ್ರಾ. ಮಧ್ಯಪ್ರದೇಶ ಮೂಲದವನು. ಕೊಲೆಯಾದ ಶಕೀರಾ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳು. ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದಾಗ ತಮ್ಮ ಜನಪರ ಕೆಲಸಗಳಿಂದ ಅಪಾರ ಗೌರವ ಪಡೆದುಕೊಂಡಿದ್ದರು. ಅವರ ಮೊಮ್ಮಗಳಾದ  ಶಕೀರಾ ನಮಾಜಿ ಅವರನ್ನು ಶೃದ್ಧಾನಂದ 1991ರಲ್ಲಿ ಭೀಕರವಾಗಿ ಕೊಲೆ ಮಾಡಿದ್ದ.

ಶಕೀರಾ ಹೆಸರಲ್ಲಿದ್ದ ಅಪಾರ ಆಸ್ತಿಯನ್ನು ಕಬಳಿಸಲು ಈ ದುಷ್ಟ ಕೆಲಸ ಮಾಡಿದ್ದ. ಶಕೀರಾಳನ್ನು ಪ್ರಜ್ಞೆ ತಪ್ಪಿಸಿ ಜೀವಂತವಾಗಿ ಹೂಳುವ ಮೂಲಕ ಕೊಲೆ ಮಾಡಿದ್ದ. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಶ್ರದ್ಧಾನಂದ 2001 ರಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಿಂದ ತವರು ರಾಜ್ಯವಾದ ಮಧ್ಯಪ್ರದೇಶದ ಸಾಗರ್ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದ. 83 ವರ್ಷದ ಶ್ರದ್ದಾನಂದ ಕಳೆದ 27 ವರ್ಷಗಳಿಂದ ಜೈಲು ವಾಸಿಯಾಗಿದ್ದಾರೆ. ಆತನಿಗೆ ಜೀವಾವಧಿ, ಅಂದರೆ 30 ವರ್ಷ‍್ಗಳ ಶಿಕ್ಷೆಯಾಗಿದೆ.

ಅಂದು 600 ಕೋಟಿ ರೂ ಮೌಲ್ಯ ಹೊಂದಿದ್ದ  ಆಸ್ತಿಯನ್ನು ಹೊಡೆದುಕೊಳ್ಳಲು ಶಕೀರಾ  ಅವರನ್ನು ಜೀವಂತವಾಗಿ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ವೈಭವೋಪೇತ ಬಂಗಲೆಯ ಮಧ್ಯದಲ್ಲಿ ಶವಪೆಟ್ಟಿಗೆಯಲ್ಲಿ ಇಟ್ಟು ಹೂತಿದ್ದಾಗಿ ತನಿಖೆಯ ವೇಳೆ ಶ್ರದ್ಧಾನಂದ ಒಪ್ಪಿಕೊಂಡಿದ್ದರು. ಅಪರಾಧಿಯನ್ನು 1994ರ ಏಪ್ರಿಲ್ 30ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಆಸ್ತಿಯ ಅಧಿಕಾರ ಮತ್ತು ವಿಲ್ ಅನ್ನು ಶ್ರದ್ಧಾನಂದ ಹೆಸರಿಗೆ ವರ್ಗಾಯಿಸಿದ ಬಳಿಕ ಆಕೆಯನ್ನು ಕೊಲೆ ಮಾಡಲಾಗಿತ್ತು ಎಂಬ ವಿಚಾರವನ್ನು ಪೊಲೀಸರು ತನಿಖೆಯ ವೇಳೆ ಪತ್ತೆ ಹಚ್ಚಿದ್ದರು.

ಈ ಘಟನೆಯು ಭಾರತದ ಕ್ರಿಮಿನಲ್ ಇತಿಹಾಸದಲ್ಲಿ ಅತ್ಯಂತ ಘೋರ ಪ್ರಕರಣಗಳಲ್ಲಿ ಒಂದಾಗಿ ವರದಿಯಾಗಿದೆ ಎಂದು ಬಾರ್ & ಬೆಂಚ್ ಹೇಳುತ್ತದೆ. ಅದರ ಪ್ರಕಾರ, ಅಪರಾಧ ಪ್ರಕರಣದಲ್ಲಿ ಮೃತದೇಹವನ್ನು ಹೊರ ತೆಗೆಯುವುದನ್ನು ವಿಡಿಯೊದಲ್ಲಿ ದಾಖಲಿಸಿದ ಮೊದಲ ಪ್ರಕರಣ ಇದಾಗಿದ್ದು, ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಮೈಲುಗಲ್ಲಾಗಿದೆ. ಭೂಮಿಯಿಂದ ಹೊರತೆಗೆಯಲಾದ ಕಳೇಬರದ ವಿಡಿಯೊ ಮತ್ತು ವಂಶವಾಹಿ ಪರೀಕ್ಷೆಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಿದ ದೇಶದ ಮೊದಲ ಪ್ರಕರಣ ಸಹ ಇದು ಎಂದು ದಾಖಲಾಗಿದೆ.

1997ರಲ್ಲಿ ಪ್ರಕರಣದ ವಿಚಾರಣೆ ಆರಂಭವಾಯಿತು. 2005ರಲ್ಲಿ ಬೆಂಗಳೂರಿನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ ಎಸ್ ತೋಟದ್ ಅವರು ಶ್ರದ್ಧಾನಂದಗೆ ಗಲ್ಲು ಶಿಕ್ಷೆ ವಿಧಿಸಿದ್ದರು..ಮುಂದೆ ಗಲ್ಲು ಶಿಕ್ಷೆಯನ್ನು ರದ್ದು ಮಾಡಿದ ಸುಪ್ರೀಂಕೋರ್ಟ್ 30 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಕೀರಾ ನಮಾಜಿ ಅವರು ತಮ್ಮ ಮೊದಲ ಪತಿಯಾದ, ಇರಾನ್ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತದ ರಾಯಭಾರಿಯಾಗಿದ್ದ ಅಕ್ಬರ್ ಖಲೀಲಿ ಅವರಿಗೆ 1985ರಲ್ಲಿ ವಿಚ್ಚೇದನ ನೀಡಿದ್ದರು.

ನಂತರ ಅವರು ಶ್ರದ್ಧಾನಂದ ಅವರನ್ನು ವರಿಸಿದ್ದರು. ಅವರ ಸಹಿ ಹಾಗೂ ಅವರ ಸ್ವಂತಿಕೆಯನ್ನು ಕಬಳಿಸಿ ಇಲ್ಲವೇನಿಸಿದ ಮಹಾಪಾಪಿ ಈಗ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದಾನೆ. ಸಿಗದಿರಲಿ ಎನ್ನುವುದು ಎಲ್ಲರ ಪ್ರಾರ್ಥನೆ.

You may also like...