• Uncategorised

ಬಿಜೆಪಿ ಟಿಕೆಟ್ ರಿಜೆಕ್ಟ್ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್’ ರಾಜ್ ಕುಟುಂಬಕ್ಕೆ ಮತ್ತಷ್ಟು ಗೌರವ ಹೆಚ್ಚಾಯಿತು

ರಾಜ್ಯದಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ಚುನಾವಣಾ ಕಾವು ಸಕತ್ ಜೋರಾಗಿಯೇ ಇದೆ. ಕಾಂಗ್ರೆಸ್ ಅನ್ನು ಎದುರಿಸಲು ಬಿಜೆಪಿ-ಮ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಇನ್ನೇನು ಫೈನಲ್ ಹಂತಕ್ಕೆ ಬಂದಿದೆ. ಇದರ ಜೊತೆ ಜೊತೆಗೆ ರಾಜ್ಯ ಸಭಾ ಚುನಾವಣೆಯ ಬಗ್ಗೆಯೂ ಹೊಸ ಅಪ್‌ಡೇಟ್‌ಗಳು ಬರುತ್ತಿವೆ.

ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಸಂಬಂಧ ಕನ್ನಡದ ರಾಜಕೀಯ ಮತ್ತು ಸಿನಿಮಾ ರಂಗವೇ ಆಶ್ಚರ್ಯ ಪಡುವಂತಹ ವರದಿಯೊಂದು ಬಂದಿದೆ. ಇದರ ಪ್ರಕಾರ ಭಾರತೀಯ ಜನತಾ ಪಕ್ಷವೂ ದೊಡ್ಮನೆ ಸೊಸೆಯನ್ನು ಕಣಕ್ಕೆ ಇಳಿಸಲು ಸಿದ್ಧವಾಗಿತ್ತು ಎಂಬುದನ್ನು ಬಹಿರಂಗ ಪಡಿಸಿದೆ.ಡಾ. ರಾಜ್‌ಕುಮಾರ್ ಅವರ ಸೊಸೆ, ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿ​ಗೆ ರಾಜ್ಯಸಭೆ ಟಿಕೆಟ್​ ನೀಡಲು ಬಿಜೆಪಿ ಮುಂದಾಗಿತ್ತು ಎನ್ನುವ ವಿಚಾರವನ್ನು ಬಹಿರಂಗಪಡಿಸಿದೆ.

ರಾಜ್ಯ ಬಿಜೆಪಿಯಿಂದ ನಿರ್ಮಾಪಕಿ ಅಶ್ವಿನಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡುವ ಪ್ರಸ್ತಾಪ ಇಡಲಾಗಿತ್ತು. ಈ ಪ್ರಸ್ತಾಪಕ್ಕೆ ಬಿಜೆಪಿ ಹೈಕಮಾಂಡ್‌ ಕೂಡ ಒಪ್ಪಿಗೆ ಸೂಚಿಸಿತ್ತು ಎನ್ನಲಾಗಿದೆ.ರಾಜ್ಯ ಸಭಾ ಚುನಾವಣಾಗೆ ಈ ಬಾರಿ ರಾಜ್ಯದಿಂದ ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಯನ್ನು ಶಿಫಾರಸ್ಸು ಮಾಡುವಂತೆ ಹೈಕಮಾಂಡ್ ಬಿಜೆಪಿ ನಾಯಕರಿಗೆ ಸೂಚಿಸಿತ್ತು. ಈ ವೇಳೆ ರಾಜ್ಯ ಬಿಜೆಪಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ಹೆಸರನ್ನು ಸೂಚಿಸಿದೆ ಎನ್ನಲಾಗಿದೆ. ಬಳಿಕ ರಾಜ್ಯ ಬಿಜೆಪಿ ನಾಯಕರು ಅಶ್ವಿನಿ ಅವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಕೇಸರಿ ಪಕ್ಷದ ಪ್ರಸ್ತಾಪವನ್ನು ಅವರು ನಿರಾಕರಿಸಿದ್ದಾರೆ.

ರಾಜಕೀಯದಿಂದ ನಮ್ಮ ಕುಟುಂಬ ಮೊದಲಿನಿಂದಲೂ ದೂರ ಉಳಿದುಕೊಂಡು ಬಂದಿದೆ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ರಾಜ್ಯ ಬಿಜೆಪಿಗೆ ತಿಳಿಸಿದ್ದಾರೆ. ಇವರ ಬಳಿಕ ಈ ಟಿಕೆಟ್ ಪಾಟೇಗಾರ ಸಮುದಾಯದ ನಾರಾಯಣ ಬಾಂಢಗೆಗೆ ದೊರಕಿದೆ. ಇಲ್ಲಿ ಗಮನಿಸಬೇಕಾದದ್ದು, ಈ ಹಿಂದೆ ವರನಟ ರಾಜ್‌ಕುಮಾರ್, ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಕೂಡ ರಾಜಕೀಯ ಪಕ್ಷಗಳ ಟಿಕೆಟ್ ಆಫರ್‌ಗಳನ್ನು ನಿರಾಕರಿಸಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ.

You may also like...