• Uncategorised

ಮಂಗಳೂರಿನಲ್ಲಿ ಈ‌ ಬಾರಿ NOTA ಅಭಿಯಾನ; ಬಿಜೆಪಿಗೆ ದೊಡ್ಡ ಮಟ್ಟದ ಸೋಲು ಸಾಧ್ಯತೆ;

ಬಿಜೆಪಿಯ ಭದ್ರ ಕ್ಷೇತ್ರ ಎನಿಸಿಕೊಂಡಿದ್ದ ಮಂಗಳೂರಲ್ಲಿ ಈಗ ಬುಡ ಅಲ್ಲಾಡುತ್ತಿದೆ. ಕೆಲವರು ಕಾಂಗ್ರೇಸ್ ಬೆಂಬಲ ಸೂಚಿಸಿದ್ದು ಯಾರಾಗುತ್ತಾರೆ ಮುಂದಿನ ಅಧಿಪತಿ ಎನ್ನುವಂತಾಗಿದೆ.ಮಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ವಿಚಾರ ಲೋಕಸಭಾ ಚುನಾವಣೆಯಲ್ಲಿ ಪ್ರತಿಧ್ವನಿಸುತ್ತಿದೆ.

ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಂಗಳೂರು ನಗರ ಅಭಿವೃದ್ದಿಯಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಈ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆದಿದ್ದರೂ ಅದು ಯಾವ ರೀತಿ ಅನುಷ್ಠಾನಗೊಳ್ಳಬೇಕಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಕಾಮಗಾರಿಯ ನಡೆದಿದೆ. ಮೀನುಗಾರಿಕೆಯ ಅಭಿವೃದ್ದಿ ಯೋಜನೆಗಳನ್ನು ಮುಂದಿಟ್ಟುಕೊಂಡು ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯಬೇಕಿದ್ದರೂ ಅದು ಕೇವಲ, ರಸ್ತೆ, ತೋಡು ಅಭಿವೃದ್ಧಿಗೆ ಸೀಮಿತವಾಗಿದೆ ಎಂಬ ಆರೋಪವಿದೆ.

ಈ ಹಿಂದೆ ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಚಾರಕ್ಕೆ ಕರ್ನಾಟಕ ರಾಜ್ಯ ಬಿಜೆಪಿ ಸಿಡೆದೆದ್ದಿದೆ. ಮಂಗಳೂರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನಿಸಿದ ಘಟನೆ ಬುಧವಾರ ನಡೆದಿದ್ದು, ಈ ವೇಳೆ ಹೈಡ್ರಾಮಾವೇ ನಡೆದಿತ್ತು. ಹಾಗಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನಿಸುತ್ತದೆ.

ಇನ್ನು ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹಿಸಿ ನೋಡಿದಾಗ ಬಿಜೆಪಿಯಿಂದ ಜನತೆ ಬೆಸೆತ್ತಿದೆ ಹಾಗೆಂದು ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಹಾಗಾಗಿ ಯಾವ ಪಕ್ಷಕ್ಕೆ ಮತದಾರ ಪ್ರಭು ವೋಟ್ ಮಾಡುತ್ತಾನೆ ಕಾದು ನೋಡಬೇಕಿದೆ.

You may also like...