• Uncategorised

ಮಂಗಳೂರಿನ ಸಮೀಪ ಸಾಕ್ಷಾತ್ ರಕ್ತೇಶ್ವರಿ ದೈವ ಸಂಚಾರದ ಗೆಜ್ಜೆ ಸದ್ದು; ಮಧ್ಯರಾತ್ರಿ ಹೇಳಿಬಂತು ದೈವನರ್ತನ

ದೇವರಿದ್ದಾನ? ದೈವವಿದೆಯೇ? ಎಂದೆನ್ನುವ ಈ ಯುಗದಲ್ಲಿ. ಆಧುನಿಕ ಕಾಲದಲ್ಲಿ ದೇವರು ದಿಂಡರು, ಕರ್ಮಫಲದ ಬಗ್ಗೆ ಜನರಿಗೆ ನಂಬಿಕೆ ಕಡಿಮೆ. ಆದರೆ ತುಳುನಾಡಿನ ದೈವಗಳು ಮಾತ್ರ ಇಂದಿಗೂ ತನ್ನ ಇರುವಿಕೆಯನ್ನು ತೋರಿಸುತ್ತಿದೆ. ಸಾವಿರಾರು ಜನರು ಈ ದೈವದ ಅನುಭೂತಿಯನ್ನು ಪಡೆದಿದ್ದಾರೆ. ಇಡೀ ಊರಿಗೇ ಊರೇ ಕೇಳುವಂತಹ ದೈವದ ಗೆಜ್ಜೆ ಸದ್ದು ಈಗ ಮಂಗಳೂರಿನ ಯೆಯ್ಯಾಡಿಯಲ್ಲಿ ಕೇಳಿಸಿದೆ.

ಮಧ್ಯರಾತ್ರಿ ದೈವದ ಸವಾರಿಗೆ ನೂರಾರು ಜನರು ಪ್ರತ್ಯಕ್ಷ ಸಾಕ್ಷಿಗಳಾಗಿದ್ದು, ದೈವ ಸಂಚಾರದ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಂಗಳೂರಿನಲ್ಲಿ ಮತ್ತೊಂದು ದೈವ ಪವಾಡ ಸಂಭವಿಸಿದೆ‌. ಮಧ್ಯ ರಾತ್ರಿ ಗೆಜ್ಜೆ ಸದ್ದು ಹಾಗು ಬೆಂಕಿಯ ರೂಪದಲ್ಲಿ ದೈವದ ಸಂಚಾರ ಆಗುವ ವಿಸ್ಮಯಕಾರಿ ದೃಶ್ಯ ಸ್ಥಳೀಯ ನಿವಾಸಿಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಮಂಗಳೂರಿನ ಏಯ್ಯಾಡಿ ಇಂಡಸ್ಟ್ರಿಯಲ್ ಏರಿಯಾದ ಲಿಯೋ ಕ್ರಾಸ್ತಾ ಕಾಂಪೌಂಡ್‌ನಲ್ಲಿ ನಿರಂತರವಾಗಿ ದೈವದ ಗೆಜ್ಜೆ ಸದ್ದು ಕೇಳಿ ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಮಧ್ಯರಾತ್ರಿ ಒಂದೆರೆಡು ಗಂಟೆಯ ಸಂಧರ್ಭದಲ್ಲಿ ದೈವದ ಸಂಚಾರ ಆರಂಭವಾಗುತ್ತಿದ್ದು, ಪ್ರದೇಶದ ಎರಡು ಮಾರ್ಗ ಜೋಡುವ ಸ್ಥಳದಿಂದ ದೈವದ ಹೆಜ್ಜೆ ಸದ್ದು ಕೇಳಿಸುತ್ತಿದೆ. ಜನ ನಂಬುವ ದೈವ ರಕ್ತೇಶ್ವರಿಯ ವಲಸೆ ಇದು ಎನ್ನುವುದು ಸ್ಥಳೀಯ ಜನರ ನಂಬಿಕೆಯಾಗಿದ್ದು, ಜನರ ನಂಬಿಕೆಯಂತೆಯೇ ದೈವದ ಸದ್ದು ದೈವ ಆರಾಧನೆಗೊಳ್ಳುವಂತಹ ಮರದ ಬಳಿಯೇ ಕೊನೆಯಾಗುತ್ತಿದೆ.

ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಕಳೆದ ಹಲವು ವರ್ಷಗಳಿಂದ ಆ ಪ್ರದೇಶದ ನಾಗನ ಬನಕ್ಕೆ ದೀಪ ಇಟ್ಟು ಆರಾಧನೆ ಮಾಡುತ್ತಿದ್ದು, ಆ ಸ್ಥಳದಲ್ಲಿಯೇ ಮೊದಲು ಅವರಿಗೆ ದೈವದ ಹೆಜ್ಜೆ ಸದ್ದು ಕೇಳಿಸಿದೆ. ಯಾರೋ ನಡೆದುಕೊಂಡು ಹೋಗುವಂತೆ, ಹಿಂಬಾಲಿಸುವಂತೆ ಅನುಭವವಾಗಿದ್ದು,ಈ ಬಗ್ಗೆ ಪ್ರಶ್ನಾ ಚಿಂತನೆ ಯಲ್ಲಿ ಕೇಳಿದ್ರೆ ಬನದ ಪಕ್ಕದಲ್ಲೇ ಇರುವ ರೆಂಜಿರ್ ಮರದಲ್ಲಿ ರಕ್ತೇಶ್ವರಿ ದೈವದ ಸಾನಿಧ್ಯವಿರೋದು ಗೊತ್ತಾಗಿದೆ.ಬಳಿಕ ರಕ್ತೇಶ್ವರಿಯ ಆರಾಧನೆಯನ್ನೂ ದೀಪು ಶೆಟ್ಟಿಗಾರ್ ಮಾಡುತ್ತಿದ್ದು, ಈ ದೈವ ಪ್ರತಿದಿನ ರಾತ್ರಿ ಸಂಚಾರ ಮಾಡುವ ಅನುಭವ ಜನರಿಗೆ ಆಗಿಯಂತೆ.

ಲಿಯೋ ಕ್ರಾಸ್ತ ಕಾಂಪೌಂಡ್‌ನಲ್ಲಿರುವ ಶ್ರೀ ನಾಗ, ರಕ್ತೇಶ್ವರಿ ಹಾಗು ಪರಿವಾರ ದೈವಗಳ ಸಾನಿಧ್ಯವಿದೆ‌. ಈ ಸಾನಿಧ್ಯದಲ್ಲಿ ವರ್ಷಂಪ್ರತಿ ನಡೆಯುವ ಪೂಜೆ ಸಂಧರ್ಭದಲ್ಲಿ ರಾತ್ರಿಯೂ ಗೆಜ್ಜೆ ಸದ್ದು ಕೇಳಿಸಿದೆ. ಮುಂದೆ ಈ ಜಾಗವನ್ನು ಅಭಿವೃದ್ಧಿ ಮಾಡುವ ಕನಸು ಊರಿನ ಜನರಲ್ಲಿದೆ. ಪೃಕೃತಿಯ ಜೊತೆ ಲೀನವಾದ ದೈವಶಕ್ತಿಯನ್ನು ಪೃಕೃತಿಯ ನಡುವಲ್ಲೇ ಆರಾಧನೆ ಮಾಡುವ ಯೋಜನೆಯನ್ನು ಇಲ್ಲಿನ ಭಕ್ತರು ಹೊಂದಿದ್ದಾರೆ.

You may also like...