• Uncategorised

ರಜನಿಕಾಂತ್ ಬಗ್ಗೆ ಖ್ಯಾ.ತ ನಟಿ ಹೇಳಿದ್ದೇನು ಗೊತ್ತಾ, ತಲೆಕೆಡಿಸಿಕೊಂಡ ಪ್ರೇಕ್ಷಕರು

ಸಿನಿಮಾ ಅಂದರೆ ಅದು ಬಣ್ಣದ ಲೋಕ. ಅಲ್ಲಿನ ಸಣ್ಣ ಸದ್ದು ದೊಡ್ಡ ಸುದ್ದಿಯನ್ನೇ ಮಾಡುತ್ತದೆ. ಅದರಂತೆ, ಇದೀಗ ಸೌತ್‌ನ ಸ್ಟಾರ್‌ ನಟ ರಜಿನಿಕಾಂತ್‌ ಕುರಿತ ಸುದ್ದಿಯೊಂದು ಎಲ್ಲೆಡೆ ವೈರಲ್‌ ಆಗಿದೆ. ಅದೇನೆಂದರೆ, ಬಹುಭಾಷಾ ನಟಿ ಕವಿತಾ ಅವರ ಜತೆಗೆ ತಲೈವಾ ರಜಿನಿ ರಹಸ್ಯ ಮದುವೆ ಆಗಿತ್ತಂತೆ.

ಹೌದು, ಬಾಲನಟಿಯಾಗಿ ತಮ್ಮ 11ನೇ ವಯಸ್ಸಿಗೇ ತಮಿಳು ಚಿತ್ರರಂಗ ಪ್ರವೇಶಿಸಿದ್ದ ನಟಿ ಕವಿತಾ, ತಮಿಳಿನಲ್ಲಿ ಸುಮಾರು 100ಕ್ಕೂಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟಿ. ಅವರು ರಜನಿಕಾಂತ್, ಶಿವಾಜಿ ಗಣೇಶನ್ ಸೇರಿದಂತೆ ಹಲವಾರು ಘಟಾನುಘಟಿ ನಾಯಕರ ಜತೆ ನಟಿಸಿ ಟಾಪ್ ನಟಿ ಎನಿಸಿಕೊಂಡವರು. ತೆಲುಗಿನಲ್ಲಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಟಾಲಿವುಡ್‌ನಲ್ಲಿ ತುಂಬಾ ಖ್ಯಾತಿ ಪಡೆದುಕೊಂಡವರು. 

ಇಂತಹ ನಟಿ ಕವಿತಾ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯೊಂದು ಪ್ರಕಟವಾಗಿದೆ. ನಟ ರಜನಿಕಾಂತ್ ಜತೆ ಸಿನಿಮಾದಲ್ಲಿ ನಟಿಸುವಾಗ ನಟ ರಜನಿಕಾಂತ್ ಹಾಗೂ ನಟಿ ಕವಿತಾ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆ ಸಮಯದಲ್ಲಿ ನಟಿ ನಟ ಮೋಹನ್ ಬಾಬು ಜತೆ ಸಿನಿಮಾ ಚಿತ್ರೀಕರಣದಲ್ಲಿದ್ದಾಗ ಈ ಸಂಗತಿ ಕವಿತಾ ಗಮನಕ್ಕೆ ಬಂದಿದೆ.

ತಕ್ಷಣ ಅವರು ಅದನ್ನು ಮೋಹನ್ ಬಾಬು ಜತೆ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ನಟಿ ಕವಿತಾ ಅವರು ಯೂಟ್ಯೂಬ್ ಒಂದಕ್ಕೆ ಸಂದರ್ಶನ ಕೊಡುತ್ತಿದ್ದ ವೇಳೆ ನಟ ರಜನಿಕಾಂತ್ ಹಾಗೂ ತಮ್ಮ ಬಗ್ಗೆ ಇಲ್ಲಸಲ್ಲದ ಗಾಸಿಪ್ ಹಬ್ಬಿತ್ತು, ನಾವಿಬ್ಬರೂ ರಹಸ್ಯವಾಗಿ ಮದುವೆ ಆಗಿದ್ದೇವೆ ಎಂದು ಕೂಡ ಗಾಸಿಪ್ ಹಬ್ಬಿತ್ತು. ಎಂದು ಹಬ್ಬಿರುವ ಗಾಸಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಆದರೆ ಈ ವಿಷಯ ಮರುದಿನ ಮಾಧ್ಯಮಗಳಲ್ಲಿ ರಜನಿಕಾಂತ್ ಹಾಗೂ ಕವಿತಾ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಪ್ರಕಟವಾಗಿದೆಯಂತೆ. 
ತಮ್ಮಿಬ್ಬರ ಮದುವೆ ಗುಟ್ಟಾಗಿ ನಡೆದಿತ್ತು ಎಂದು ಹಬ್ಬಿರುವ ಸುದ್ದಿಯ ಬಗ್ಗೆ ಹೇಳಿದ ಕವಿತಾಗೆ ಶಾಕ್ ಎಂಬಂತೆ ಅದೇ ಗಾಸಿಪ್ ತಕ್ಷಣ ಅಧಿಕೃತ ಸುದ್ದಿ ಎಂಬಂತೆ ಪ್ರಕಟವಾಗಿದೆ ಎಂದು ಕೂಡ ಬೇಸರ ವ್ಯಕ್ತಪಡಿಸಿದ್ದರು.

You may also like...