• Uncategorised

ವಾರ್ಡನ್ ರಶ್ಮಿಯನ್ನು ಕೂಡ ಬಿಡದೆ ಆ ಕೆಲಸ ಮಾಡುತ್ತಿದ್ದ ಮುರುಘಾಶ್ರೀ ಬಿಡುಗಡೆ

ಮುರುಘಾಮಠದ ಪೀಠಾಧ್ಯಕ್ಷರಾಗಿದ್ದ ಮುರುಘಾ ಶ್ರೀ, ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನವಾಗಿದ್ದರು. ಮಠದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪದಲ್ಲಿ ಬಂಧನವಾಗಿತ್ತು. 761 ಪುಟಗಳ ಚಾರ್ಜ್‌ಶೀಟ್‌ ಫೈಲ್ ಮಾಡಲಾಗಿತ್ತು. ನಿನ್ನೆ ಬೇಲ್ ಆದೇಶ ತಡವಾಗಿದ್ದರಿಂದ ನಿನ್ನೆಯ ಬದಲು ಇಂದು ರಿಲೀಸ್ ಆಗಿದ್ದಾರೆ.

14 ತಿಂಗಳ ಬಳಿಕ ಮುರುಘಾಶ್ರೀ, ಪೋಕ್ಸೋ ಪ್ರಕರಣದಲ್ಲಿ ಜಾಮೀನು ಸಿಕ್ಕ ಹಿನ್ನಲೆ ಜೈಲಿನಿಂದ ಹೊರಬಂದಿದ್ದಾರೆ. ಆದರೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡುವಂತಿಲ್ಲ.ಪ್ರಕರಣದ ಸಾಕ್ಷ್ಯಾಧಾರ ನಾಶ ಮಾಡುವಂತಿಲ್ಲ, ಪ್ರಭಾವ ಬೀರುವಂತಿಲ್ಲ. ಇಂತಹ ಕೃತ್ಯ ಪುನರಾವರ್ತನೆ ಮಾಡುವಂತಿಲ್ಲ. ಇಬ್ಬರು ಶೂರಿಟಿ ನೀಡಬೇಕು. ಪಾಸ್‌ಪೋರ್ಟ್ ಕೋರ್ಟ್‌ಗೆ ಸಲ್ಲಿಸಬೇಕು. ಕೋರ್ಟ್‌ಗೆ ವಿಸಿ ಮೂಲಕ ಹಾಜರಾಗಬೇಕು.

ಚಿತ್ರದುರ್ಗಕ್ಕೆ ಪ್ರವೇಶವಿಲ್ಲ. ವೀಡಿಯೋ ಕಾನ್ಫರೆನ್ಸ್‌ ಮೂಲಕವಾದರೂ ಪ್ರಕರಣದ ವಿಚಾರಣೆಗೆ ಹಾಜರಾಗಬೇಕು. ಸೇರಿದಂತೆ ಹಲವು ಷರತ್ತುಗಳನ್ನು ಹೈಕೋರ್ಟ್ ಹಾಕಿದೆ. ಇನ್ನು ಜೈಲಿನಿಂದ ಹೊರಬಂದ ಮುರುಘಾಶ್ರೀ ನೇರವಾಗಿ ದಾವಣಗೆರೆಗೆ ತೆರಳಿದ್ದಾರೆ. ದೊಡ್ಡಪೇಟೆಯಲ್ಲಿರುವ ವಿರಕ್ತ ಮಠಕ್ಕೆ ತೆರಳುವ ಮುನ್ನ ಶ್ರೀ ಶಿವಯೋಗಿ ಮಂದಿರ ಆವರಣದಲ್ಲಿರುವ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಅಥಣಿ ಮುರುಘರಾಜೇಂದ್ರ ಶಿವಯೋಗಿಗಳ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದರು.

ಮುರುಘಾ ಶರಣರ ಬರುವಿಕೆಗೆ ಕಾಯುತ್ತಿದ್ದ ಭಕ್ತರು, ಟ್ರಸ್ಟ್ ಪದಾಧಿಕಾರಿಗಳು ಶರಣರು ಆಗಮಿಸುತ್ತಿ ದ್ದಂತೆ ಹೂಮಾಲೆ ಹಾಕಿ ಸ್ವಾಗತಿಸಿದರು. ಮುರುಘೇಶನಿಗೆ, ಶಿವಮೂರ್ತಿ ಮುರುಘಾ ಶರಣರಿಗೆ ಜಯವಾಗಲಿ ಎಂದು ಜೈಕಾರ ಹಾಕಿದ್ದಾರೆ. ಶ್ರೀ ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಲು ನ್ಯಾಯಾಲಯ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲೇ ವಾಸ್ತವ್ಯ ಮಾಡಲಿದ್ದಾರೆ.

ದೊಡ್ಡಪೇಟೆಯಲ್ಲಿನ ವಿರಕ್ತ ಮಠದಲ್ಲಿ ಇರುವ ಮುರುಘಾ ಶರಣರು ಶಿವಯೋಗಿ ಮಂದಿರದಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವರು ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

You may also like...