3 ಆಡಿ ಇರುವ ಸಂಜು ಬಸಯ್ಯ ಅವರ ಹೆಂಡತಿ ಎಷ್ಟು ಸೂಪರ್ ಗೊತ್ತಾ, ಫಿದಾ ಆದ ಕನ್ನಡಿಗರು
ಸಂಜು ಬಸಯ್ಯ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ರಾಜ್ಯದ ಜನತೆಗೆ ಪರಿಚಯವಾದ ಪ್ರತಿಭೆ. ತಮ್ಮ ಹಾಸ್ಯದಿಂದಲೇ ಹೆಸರು ಗಳಿಸಿದ್ದ ಸಂಜು ಬಸಯ್ಯ ಇತ್ತೀಚೆಗೆ ಮದುವೆ ವಿಚಾರದಿಂದಲೂ ಸುದ್ದಿಯಲ್ಲಿದ್ದರು. ತಾವು 7 ವರ್ಷಗಳಿಂದ ಪ್ರೀತಿಸುತ್ತಿದ್ದ ಪಲ್ಲವಿ ಬಳ್ಳಾರಿ ಎಂಬ ಕಲಾವಿದೆಯೊಂದಿಗೆ ಸಂಜು ಬಸಯ್ಯ ಇತ್ತೀಚೆಗೆ ಮದುವೆ ಆಗಿದ್ದಾರೆ. ಸಂಜು ಬಸಯ್ಯ ಯಾರಿಗೂ ಹೇಳದಂತೆ ತಮ್ಮ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಕೆಲವು ದಿನಗಳ ಹಿಂದಷ್ಟೇ ಮದುವೆ ಆಗಿದ್ದರು.
ಈ ವಿಚಾರವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಅಧಿಕೃತವಾಗಿ ತಿಳಿಸಿದ್ದರು. ಜುಲೈ 30 ರಂದು ಹುಟ್ಟುಹಬ್ಬದ ಜೊತೆ ತಮ್ಮ ಮದುವೆ ಆರತಕ್ಷೆಯನ್ನು ಆಚರಿಸಿಕೊಳ್ಳುತ್ತಿರುವುದಾಗಿ ಸಂಜು ಬಸಯ್ಯ ಹಾಗೂ ಪತ್ನಿ ಪಲ್ಲವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ತಮ್ಮ ಬರ್ತ್ಡೇ, ರಿಸೆಪ್ಷನ್ ಪಾರ್ಟಿಗೆ ಆಹ್ವಾನಿಸಿದ್ದರು.
ತಮ್ಮ ಮದುವೆ ಆರತಕ್ಷತೆಗೆ ಸೆಲೆಬ್ರಿಟಿಗಳನ್ನು ಕೂಡಾ ಸಂಜು ಬಸಯ್ಯ ದಂಪತಿ ಆಹ್ವಾನಿಸಿದ್ದರು. ಭಾನುವಾರ ಪತಿ ಸಂಜು ಬಸಯ್ಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಪಲ್ಲವಿ ಬಳ್ಳಾರಿಯ ಸಂತೋಷ ನೋಡಿ ಸಂಜು ಅವರ ಕಣ್ಣಲ್ಲಿ ಆನಂದ ಬಾಷ್ಪ ಬಂದಿತ್ತು.ಬೆಳಗ್ಗೆ ಮನೆಯಲ್ಲಿ ಬರ್ತ್ಡೇ ಆಚರಣೆ ನಂತರ ಸಂಜೆ ಆರತಕ್ಷತೆಯಲ್ಲಿ ಮಿಂಚಿತ್ತು ಈ ಜೋಡಿ.
ಇನ್ನು ಸಂಜು ಬಸಯ್ಯ, ಪಲ್ಲವಿ ಆತ್ಮೀಯರು ಆರತಕ್ಷತೆಗೆ ಆಗಮಿಸಿ ಹೊಸ ಜೋಡಿಗೆ ಗಿಫ್ಟ್ ನೀಡಿ ಹಾರೈಸಿದರು.
ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಂಜು ಬಸಯ್ಯ ಸ್ನೇಹಿತರು, ಅನೇಕ ಸಿನಿ ಸೆಲೆಬ್ರಿಟಿಗಳು ಕೂಡಾ ಆರತಕ್ಷತೆಗೆ ಆಗಮಿಸಿ ಮುದ್ದು ಜೋಡಿಗೆ ಶುಭ ಹಾರೈಸಿದ್ದಾರೆ.