• Uncategorised

ಮಗು ಕಳೆದುಕೊಂಡ ಪ್ರೇಮಾ; ಇವತ್ತಿಗೂ ಕೊರಗಿಕೊರಗಿ ಡಿಪ್ರೆಶನ್ ಗೆ ಹೋಗಿದ್ದಾರೆ

ಕನ್ನಡ ಚಿತ್ರರಂಗದ ಅದ್ಭುತ ನಟಿ ಪ್ರೇಮಾ ಹಲವು ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿದ್ದಾರೆ. ಮಹಾನಟಿ ರಿಯಾಲಿಟಿ ಶೋ ತೀರ್ಪುಗಾರ್ತಿ ಆಗಿರುವ ಪ್ರೇಮಾ ಈಗಲೂ ಎವರ್‌ಗ್ರೀನ್. ನನ್ನ ಆರೋಗ್ಯದ ಬಗ್ಗೆ ಸಾಕಷ್ಟು ವಿಚಾರಗಳು ಹೊರ ಬಂತು. ನಾನು ನಿರೀಕ್ಷೆ ಮಾಡಿದ್ದು ನನಗೆ ಸಿಕ್ಕಿಲ್ಲ ಅಂದಾಗ ನಾನು ಡಿಪ್ರೆಶನ್‌ಗೆ ಜಾರಿದೆ ಅನ್ಸುತ್ತೆ. ಎಲ್ಲಾ ಹೆಣ್ಣು ಮಕ್ಕಳಿಗೂ ಹಾಗೆ ಆಗುತ್ತದೆ. 

ನನಗೆ ಅಬಾರ್ಷನ್ ಆಯ್ತು ಆಸ್ಪತ್ರೆಯಲ್ಲಿದ್ದೆ ಇದೇ ಕಾರಣ ಆಯ್ತು ನಾನು ಡಿಪ್ರೆಶನ್‌ಗೆ ಜಾರಲು. ಮಗಳು ಕಳೆದುಕೊಂಡೆ ಅನ್ನೋ ನೋವು ಇತ್ತು ಸೆಂಟಿಮೆಂಟ್ ಅನ್ನೋದು ಎಲ್ಲರಿಗೂ ಇರುತ್ತದೆ ಅದಕ್ಕೆ ಕೊರಗಿ ಕೊರಗಿ ನಾನು ಡಿಪ್ರೆಶನ್‌ಗೆ ಜಾರಿದೆ. ಹೌದು ಆ ನೋವನ್ನು ತಡೆದು ಕೊಳ್ಳುವ ಶಕ್ತಿ ನನಗಿರಲಿಲ್ಲ.

ಪ್ರೇಮಾಳಿಗೆ ಕ್ಯಾನ್ಸರ್ ಎಂದು ಹಬ್ಬಿಸಿದ್ದರು.ತಂದೆ ತಾಯಿ ದೇವರ ಆಶೀರ್ವಾದಿಂದ ನಾನು ಬೇಗ ಅದರಿಂದ ಹೊರ ಬಂದಿರುವೆ. 25 ವರ್ಷಗಳಿಂದ ವೈದ್ಯರು ಪರಿಚಯ ಇದ್ದ ಕಾರಣ ಸಂಪೂರ್ಣವಾಗಿ ಚೇತರಿಸಿಕೊಂಡೆ. ಆದರೂ ಕೂಡಾ ಆ ನೋವು ಮಾಸಲು. ಕೆಲಸಗಳಲ್ಲಿ ತೊಡಗಿಸಿಕೊಳ್ಳತೊಡಗಿದ್ದೇನೆ.

ಮನೆಯಲ್ಲಿದ್ದರೆ ಗುಣ ಆಗುವುದಿಲ್ಲ ಅನ್ನೋ ಕಾರಣಕ್ಕೆ ಹೊರ ಬರಲು ಬಂದೆ ಹೀಗಾಗಿ ಹೊರಗೆ ಕಾಣಿಸಿಕೊಳ್ಳಲು ಶುರು ಮಾಡಿದೆ ಎಂದು ಪ್ರೇಮಾ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನನಗೆ ಧ್ಯಾನ ತುಂಬಾ ಸಹಾಯ ಮಾಡಿತ್ತು. ನನ್ನ ಸ್ನೇಹಿತರು Osho ಸಂಸ್ಥೆಗೆ ಕರೆದುಕೊಂಡು ಹೋದರು ಆ ಸಮಯದಲ್ಲಿ ನಾನು ಆಶ್ರಮ ಸೇರಿಕೊಂಡೆ ಎಂದು ಅನೇಕರು ಹೇಳಲು ಶುರು ಮಾಡಿದ್ದರು.

ನಾಲ್ಕು ದಿನ ಕ್ಯಾಂಪ್ ಮುಗಿಸಿಕೊಂಡು ಬಂದೆ ಈಗ ಮನೆಯಲ್ಲಿ ಯೋಗ ಮಾಡುವೆ ಎಂದು ಪ್ರೇಮಾ ಹೇಳಿದ್ದಾರೆ.

You may also like...