ಬಿಗ್ಬ್ಬಾಸ್ ಮನೆಯ ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಅವರು ಇದೀಗ ಕಾನೂನು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಎಲುಬಿಲ್ಲದ ನಾಲಿಗೆಯಂತೆ ಮಾತನಾಡುವ ರಜತ್ ಗೆ ಕಾನೂನು ಸಂಕಷ್ಟ ಎದುರಿಸುವಂತಾಗಿದೆ. ಹೌದು, ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಮಾತಾನಾಡುವಾಗ ಕೆಲವೊಂದು ಮಾತಿಗೆ ಕಾನೂನಿನ ಮೂಲಕ ತಡೆಯಾಜ್ಞೆ ಇದೆ.
ರಜತ್ ಅವರು ಬಿಗ್ಬ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ದಿನದಿಂದ ತಮ್ಮ ಮಾತಿನ ಮೇಲೆ ಹಿಡಿತವಿಲ್ಲದೆ ಮಾತಾನಾಡುತ್ತಾರೆ. ಚೈತ್ರ ಕುಂದಾಪುರ ಅವರ ಮೇಲೆ ಇತ್ತಿಚೆಗೆ ತೀರಾ ಕೋಪದ ಮಾತುಗಳಿಂದ ಮಾತಾನಾಡಿದ್ದರು. ಇನ್ನು ಧನರಾಜ್ ಅವರ ಮೇಲೂ ಕೈಮಾಡಲು ಮುಂದಾಗಿದ್ದರು.
ಇನ್ನು ಬಿಗ್ ಬಾಸ್ ಮನೆಯಲ್ಲಿ ರಜತ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ ಎಂಬ ಮಾಹಿತಿ ಇದೆ. ಆದರೆ ಇದುವರೆಗೆ ಯಾವುದೇ ಮಾಹಿತಿಯನ್ನು ಬಿಗ್ ಬಾಸ್ ಸಂಸ್ಥೆ ಹೊರಹಾಕಿಲ್ಲ. ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಗ್ ಬಾಸ್ ನೀಡುವಂತೆ ಕಾಣುತ್ತಿಲ್ಲ.