• Uncategorised
  • 0

ದ್ವಾರಕೀಶ್ ಸಾ.ವಿನ ಲೈವ್ ಸಿಸಿಟಿವಿ ದೃಶ್ಯವಳಿ; ಇಡೀ ರಾಜ್ಯವೇ ಕಂಗಾಲು

ಇತ್ತೀಚೆಗೆ ದ್ವಾರಕೀಶ್ ಸಿನಿಮಾ ನಿರ್ಮಾಣ ಮಾಡಿಲ್ಲ. ಅವರು ಮನೆಯಲ್ಲೇ ಸಮಯ ಕಳೆಯಲು ಬಯಸುತ್ತಿದ್ದರು. ಬೆಳಿಗ್ಗೆ ಏಳುತ್ತಿದ್ದರು, ಸ್ನಾನ ಮಾಡಿ ದೇವರಿಗೆ ವಂದಿಸುತ್ತಿದ್ದರು. ಸಂಜೆ ವಾಕಿಂಗ್ ಮಾಡುತ್ತಿದ್ದರು. ಆ ಬಳಿಕ ಟಿವಿ ನೋಡಿ ಟೈಮ್ ಪಾಸ್ ಮಾಡುತ್ತಿದ್ದರು. ಈ ದಿನಚರಿ ಅವರಿಗೆ ಬೇಸರ ತರಿಸಿತ್ತು. ಒಂಟಿತನ ಬಹುವಾಗಿ ಕಾಡುತ್ತಿತ್ತು.

ಕೆಲ ವರ್ಷಗಳ ಹಿಂದೆ ಅವರ ಮೊದಲ ಪತ್ನಿ ಅಂಬುಜಾ ನಿಧನ ಹೊಂದಿದ್ದರು. 62 ವರ್ಷಗಳ ಕಾಲ ಇವರು ಸಂಸಾರ ನಡೆಸಿದ್ದರು. ಅವರಿಲ್ಲ ಎನ್ನುವ ನೋವು ದ್ವಾರಕೀಶ್ ಅವರನ್ನು ಬಹುವಾಗಿ ಕಾಡಿತ್ತು.ಶಾಂತ ಸಾವು ಬೇಕು ಎಂದು ಅವರು ಕೇಳಿಕೊಂಡಿದ್ದರು. ನನಗೆ ನೂರು ವರ್ಷ ಬದುಕ ಬೇಕು ಎಂಬುದಿಲ್ಲ. ಆದಷ್ಟು ಬೇಗ ಪರಮಾತ್ಮನ ಸೇರೋಕೆ ಇಷ್ಟಪಡ್ತೀನಿ.

ಇಲ್ಲಿ ಇದ್ದು ಏನು ಮಾಡೋದು ಇದೆ? ಬೆಳಿಗ್ಗೆ ಏಳಬೇಕು, ದೇವರಿಗೆ ಒಂದು ಗಂಟೆ ಟೈಮ್ ಕೊಡಬೇಕು, ಊಟರ್ ಮಾಡಬೇಕು, ಮಲಗಬೇಕು, ವಾಕ್ ಮಾಡಬೇಕು, ಟಿವಿ ನೋಡಬೇಕು. ಇದು ದಿನಚರಿ ಆಗಿದೆ. ಹೋಗೋಣ, ಮರುಜನ್ಮ ಇದ್ರೆ ನೋಡೋಣ. ನನಗೆ ಶಾಂತ ಸಾವು ಬೇಕು ಎಂದು ಅವರು ಕೇಳಿಕೊಂಡಿದ್ದರು.

ದ್ವಾರಕೀಶ್ ಬಯಸಿದಂತೆ ನಡೆದಿದೆ. ಏಪ್ರಿಲ್ 15ರ ರಾತ್ರಿ ಅವರಿಗೆ ಅನಾರೋಗ್ಯ ಕೆಟ್ಟಿತ್ತು. ಹೀಗಾಗಿ ಅವರಿಗೆ ನಿದ್ರಿಸಲು ಸಾಧ್ಯವಾಗಿಲ್ಲ. ಏಪ್ರಿಲ್ 16ರ ಬೆಳಿಗ್ಗೆ ಕಾಫಿ ಕುಡಿದು ಅವರು ಮಲಗಿದ್ದರು. ಮಲಗಿದವರು ಮತ್ತೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ ಎಂದು ಕುಟುಂಬದವರು ಹೇಳಿಕೊಂಡಿದ್ದರು.

ಅವರು ಬಯಸಿದಂತೆ ಶಾಂತ ಸಾವು ಸಿಕ್ಕಿದೆ. ಅವರ ಸಾವು ಕನ್ನಡ ಚಿತ್ರರಂಗದವರಿಗೆ ಹಾಗೂ ಅಭಿಮಾನಿಗಳಿಗೆ ಬೇಸರ ತರಿಸಿದೆ.

You may also like...

Leave a Reply

Your email address will not be published. Required fields are marked *