• Uncategorised

ರವಿಚಂದ್ರನ್ ಮೇಲೆ ಅ.ತ್ಯಾಚಾರ ಆರೋಪ ಬಂದಾಗ ‌ಖುಷ್ಬೂ ಹೇಳಿದ್ದೇನು ಗೊ ತ್ತಾ

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡದ ಕನಸುಗಾರನಾಗಿ ಹಲವು ಸುಂದರವಾದ ಕನಸುಗಳನ್ನು ಸಿನಿಮಾ ರೂಪದಲ್ಲಿ ಕನ್ನಡ ಸಿನಿಪ್ರಿಯರಿಗೆ ನೀಡಿದ್ದಾರೆ. ರವಿಚಂದ್ರನ್ ಅವರು ತಮ್ಮ ಸಿನಿ ಕೆರಿಯರ್ ನಲ್ಲಿ ಏಳು ಬೀಳುಗಳನ್ನು ಕಂಡಿದ್ದಾರೆ. ಅವರು ಬಹಳ ಪ್ರೀತಿಯಿಂದ ಮಾಡಿದ ಕೆಲವು ಸಿನಿಮಾಗಳು ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣಲಿಲ್ಲ, ಇದರಿಂದಾಗಿ ರವಿಚಂದ್ರನ್ ಅವರು ಸೋಲು ಕಷ್ಟ ಅನುಭವಿಸಬೇಕಾಯಿತು. ರವಿಚಂದ್ರನ್ ಅವರು ಅಂದು ಕಷ್ಟದಲ್ಲಿದ್ದಾಗ, ನಟಿ ಖುಷ್ಬೂ ಅವರು ಸಹಾಯ ಮಾಡಿದ್ದರು.

ಖುಷ್ಬೂ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದು ಕ್ರೇಜಿಸ್ಟಾರ್ ರವಿಚಂದ್ರನ್, ಈ ಜೋಡಿ ಹಲವು ಸಿನಿಮಾಗಳಲ್ಲಿ ನಟಿಸಿ, ಕನ್ನಡ ಸಿನಿಪ್ರಿಯರ ಮನಸ್ಸಿನಲ್ಲಿ ಉಳಿದಿದ್ದಾರೆ. ರವಿಚಂದ್ರನ್ ಮತ್ತು ಖುಷ್ಬೂ ಅವರು ನಿಜ ಜೀವನದಲ್ಲಿ ಕೂಡ ಬೆಸ್ಟ್ ಫ್ರೆಂಡ್ಸ್. ಒಬ್ಬರ ಕಷ್ಟದ ಸಮಯದಲ್ಲಿ ಮತ್ತೊಬ್ಬರು ಸಹಾಯ ಮಾಡಿದ್ದಾರೆ. ಅಂದು ರವಿಚಂದ್ರನ್ ಅವರು ಬಹಳ ಕಷ್ಟದಲ್ಲಿದ್ದಾಗ, ಒಂದು ಸಿನಿಮಾ ಮಾಡಿ ಹಿಟ್ ಕೊಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಆ ಸಮಯದಲ್ಲಿ ರವಿಚಂದ್ರನ್ ಅವರಿಗೆ ಸಿಗುವುದು ತಮಿಳಿನ ಚಿನ್ನ ತಂಬಿ ಸಿನಿಮಾ, ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ಪ್ಲಾನ್ ಮಾಡಿ, ಖುಷ್ಬೂ ಅವರು ಬ್ಯುಸಿ ಇದ್ದ ಕಾರಣ ಮಾಲಾಶ್ರೀ ಅವರನ್ನು ಹೀರೋಯಿನ್ ಆಗಿ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ. ಆ ಸಮಯದಲ್ಲಿ ರವಿಚಂದ್ರನ್ ಅವರು ಖುಷ್ಬೂ ಅವರಿಗೆ ಕರೆಮಾಡಿ, ಚಿನ್ನ ತಂಬಿ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡ್ತಾ ಇರುವ ವಿಚಾರ ತಿಳಿಸಿ, ಮಾಲಾಶ್ರೀ ಅವರು ನಾಯಕಿ ಆಗಿರುವುದಾಗಿ ಹೇಳಿದ ಕ್ರೇಜಿಸ್ಟಾರ್, ಸಿನಿಮಾ ರಿಮೇಕ್ ರೈಟ್ಸ್ ಕೊಡಿಸಬೇಕು ಎಂದು ಖುಷ್ಬೂ ಅವರಿಗೆ ಕೇಳುತ್ತಾರೆ.

ಆಗ ಬಹಳ ಸಂತೋಷದಿಂದ ಒಪ್ಪುವ ಖುಷ್ಬೂ ಅವರು ಚಿನ್ನ ತಂಬಿ ಸಿನಿಮಾ ರಿಮೇಕ್ ಹಕ್ಕನ್ನು ರವಿಚಂದ್ರನ್ ಅವರಿಗೆ ಕೊಡಿಸುತ್ತಾರೆ. ಕನ್ನಡದಲ್ಲಿ ರಾಮಾಚಾರಿ ಆಗಿ ತೆರೆಕಂಡ ಚಿನ್ನ ತಂಬಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹೀಗೆ ರವಿಚಂದ್ರನ್ ಅವರ ಕಷ್ಟದ ಸಮಯದಲ್ಲಿ ಖುಷ್ಬೂ ಅವರು ಬೆನ್ನೆಲುಬಾಗಿ ನಿಂತಿದ್ದರು. ಇನ್ನು ಒಂದು ಸಮಯದಲ್ಲಿ ಖುಷ್ಬೂ ಅವರು ಸಹ ಕಷ್ಟದಲ್ಲಿದ್ದರು, ಅವರ ತಾಯಿಗೆ ಅನಾರೋಗ್ಯವಾಗಿ, ಸ್ಥಿತಿ ಚಿಂತಾಜನಕ ಆಗಿತ್ತು.

ಆ ಸಮಯದಲ್ಲಿ ತಾಯಿಯನ್ನು ಉಳಿಸಿಕೊಳ್ಳುವ ಭರವಸೆ ಖುಷ್ಬೂ ಅವರಿಗೆ ಇತ್ತು, ಆದರೆ ಅವರಿಗೆ ಒಂದು ಸಪೋರ್ಟ್ ಬೇಕಿತ್ತು, ಆ ಸಮಯದಲ್ಲಿ ಖುಷ್ಬೂ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ರವಿಚಂದ್ರನ್ ಅವರು, ಒಂದು ಕಾರ್ಯಕ್ರಮದಲ್ಲಿ ಖುಷ್ಬೂ ಅವರೇ ಹೇಳಿದ ಹಾಗೆ, ರವಿಚಂದ್ರನ್ ಅವರು ಇಲ್ಲದೆ ಹೋಗಿದ್ದರೆ, ಖುಷ್ಬೂ ಅವರ ತಾಯಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ಬೆಸ್ಟ್ ಫ್ರೆಂಡ್ಸ್ ಆಗಿರುವ ಇವರಿಬ್ಬರು, ಒಬ್ಬರಿಗೊಬ್ಬರು ಕಷ್ಟದಲ್ಲಿ ಜೊತೆಯಾಗಿ ನಿಂತಿದ್ದರು.

You may also like...