• Uncategorised

‘ಹಾರ್ದಿಕ್ ಪಾಂಡ್ಯ ಸಹವಾಸ ಸಾಕು; ನನ್ನ ಕೈಯಲ್ಲಿ ಆಗಲ್ಲ ಎಂದು ಅಂಬಾನಿ ಪತ್ನಿಗೆ ರೋಹಿತ್ ಶರ್ಮಾ ದೂರು

ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರು ಸೋಲಿನ ಆರಂಭ ಪಡೆದರು. ರವಿವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ ಆರು ರನ್ ಸೋಲಾಗಿದೆ. ಗುಜರಾತ್ ನೀಡಿದ್ದ 169 ರನ್ ಗುರಿಯನ್ನು ಬೆನ್ನಟ್ಟಲು ಮುಂಬೈ ವಿಫಲವಾಯಿತು.ಆಟದ ಉದ್ದಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಅವರನ್ನು ಟ್ರೋಲ್ ಮಾಡಲಾಯಿತು.

ಡೀಪ್‌ನಲ್ಲಿ ಫೀಲ್ಡಿಂಗ್ ಮಾಡಲು ರೋಹಿತ್‌ ಗೆ ಹಾರ್ದಿಕ್ ಗೆ ಹೇಳಿದ ರೀತಿಯಿಂದ ಮುಂಬೈ ಹೊಸ ನಾಯಕ ಟ್ರೋಲ್ ಗೆ ಒಳಗಾದರು. ರೋಹಿತ್ ಹಿರಿತನಕ್ಕೆ ಮೈದಾನದಲ್ಲಿ ಗೌರವ ಕೊಡಲಿಲ್ಲ ಎಂದು ಹಾರ್ದಿಕ್‌ ಗೆ ರೋಹಿತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದರು. ಇನ್ನು ಮ್ಯಾಚ್ ಮುಗಿದ ನಂತರ ಡ್ರೆಸ್ಸಿಂಗ್ ರೂಮ್ ನಲ್ಲಿ ನೀತಾ ಅಂಬಾನಿ ಹಾಗೂ ರೋಹಿತ್ ಶರ್ಮಾ ನಡುವೆ ಜಟಾಪಟಿ ನಡೆದಿದೆ.

ಆದರೆ, ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಮುಖಭಂಗವಾಗಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹಾರ್ದಿಕ್ ಇದೀಗ ರೋಹಿತ್ ಶರ್ಮಾಗೆ ತೋರಿದ ರೀತಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.ಹಾರ್ದಿಕ್ ರೋಹಿತ್ ಶರ್ಮಾ ಅವರ ಫೀಲ್ಡಿಂಗ್ ಸ್ಥಾನವನ್ನು ಪದೇ ಪದೇ ಬದಲಾಯಿಸಿದರು. ಸಾಮಾನ್ಯವಾಗಿ 30 ಯಾರ್ಡ್ ವೃತ್ತದಲ್ಲಿರುವ ರೋಹಿತ್ ಈ ಪಂದ್ಯದಲ್ಲಿ ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಕೊನೆಯ ಓವರ್ ನಲ್ಲಿ… ಹಾರ್ದಿಕ್ ರೋಹಿತ್ ಅವರನ್ನು ಸಾಮಾನ್ಯ ಆಟಗಾರನಂತೆ ನಡೆಸಿಕೊಂಡರು

ಮುಂಬೈ ಇಂಡಿಯನ್ಸ್ ಸೋಲಿನ ಬಳಿಕ ಹಾರ್ದಿಕ್‌ ಪಾಂಡ್ಯ ಅವರೊಂದಿಗೆ ರೋಹಿತ್ ಶರ್ಮಾ ಅಸಮಾಧಾನ ವ್ಯಕ್ತಪಡಿಸಲು ಕಾರಣವೇನೆಂದು ಬಹಿರಂಗವಾಗಿಲ್ಲ. ಬಹುಶಃ ಹಾರ್ದಿಕ್‌ ಪಂದ್ಯವನ್ನು ಮುಗಿಸಬೇಕಾಗಿತ್ತು ಅಥವಾ ಹಾರ್ದಿಕ್‌ ಅವರೊಂದಿಗೆ ಬೇರೆ ಯಾವುದೋ ಒಂದು ಸಂಗತಿಯ ಬಗ್ಗೆ ರೋಹಿತ್‌ ಅಮಸಮಾಧಾನ ವ್ಯಕ್ತಪಡಿಸಿರಬಹುದು. ಆದರೆ, ರೋಹಿತ್ ಶರ್ಮಾ, ಹಾರ್ದಿಕ್‌ ಪಾಂಡ್ಯಗೆ ಏನು ಹೇಳಿರಬಹುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲವಿದೆ.

You may also like...