• Uncategorised
  • 0

DCM ಸೂಪರ್ ಸ್ಟಾರ್ ಡಿಕೆಶಿಗೆ ಸಂಕಟ; ಪ್ರಜ್ವಲ್ ರೇವಣ್ಣ ವಿಡಿಯೋ ಲೀ. ಕ್ ಮಾಡಿದ್ದು

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಬಾಂಬ್ ಸಿಡಿಸಿದ್ದರು. ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಹಿಂದೆ ಇರೋದು ಡಿಸಿಎಂ ಡಿಕೆ ಶಿವಕುಮಾರ್ , ಡಿಕೆಶಿಯೇ ಇದರ ರೂವಾರಿ ಅಂತ ದೇವರಾಜೇಗೌಡ ಹೇಳಿದ್ದರು. ಅಲ್ಲದೇ ವಿಧಾನ ಪರಿಷತ್ ಮಾಜಿ ಸದಸ್ಯ ಎಲ್ಆರ್ ಶಿವರಾಮೇಗೌಡ ಅವರನ್ನು ಮಧ್ಯವರ್ತಿಯಾಗಿ ನನ್ನ ಹಿಂದೆ ಕಳಿಸಿದ್ದಾರೆ, ಏಜೆಂಟರನ್ನಾಗಿ ಆ ಮಹಾನಾಯಕ ನನ್ನ ಹಿಂದೆ ಬಿಟ್ಟಿದ್ದಾರೆ ಅಂತ ಆರೋಪಿಸಿದ್ದರು.

ದೇವರಾಜೇಗೌಡ ಆರೋಪಕ್ಕೆ ಇದೀಗ ಖುದ್ದು ಎಲ್ಆರ್ ಶಿವರಾಮೇಗೌಡ ತಿರುಗೇಟು ನೀಡಿದ್ದಾರೆ.ಇಂದು ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ದೇವರಾಜೇಗೌಡ, ಎಲ್‌ಆರ್ ಶಿವರಾಮೇಗೌಡರನ್ನು ಮಧ್ಯವರ್ತಿಯಾಗಿ ಕಳುಹಿಸಲಾಗಿದೆ. ಮಹಾನಾಯಕ ಶಿವರಾಮೇಗೌಡರನ್ನು ಏಜೆಂಟ್‌ರನ್ನಾಗಿ ನಮ್ಮ ಹಿಂದೆ ಬಿಟ್ಟಿದ್ದಾರೆ ಅಂತ ಹೇಳಿದ್ದಾರೆ.

ನನ್ನ ಆರೋಪಿ ಮಾಡೋಕೆ ಸರ್ಕಾರ ಸಂಚು ನಡೆಸಿದೆ. ಕಾಂಗ್ರೆಸ್ ಸರ್ಕಾರ ನನ್ನನ್ನು ಆರೋಪಿ ಮಾಡಿಸಲು ಹೊರಟಿದೆ. ಇದಕ್ಕಂತ ಸರ್ಕಾರ, ಎಸ್ಐಟಿ ಅಧಿಕಾರಿಗಳು ರೌಂಡ್ ಟೇಬಲ್ ಮೀಟಿಂಗ್ ಮಾಡಿದ್ದಾರೆ. ಸಂದಾನ ಮಾಡೋಕೆ ಶಿವರಾಮೇಗೌಡನ್ನು ಹಿಂದೆ ಬಿಟ್ಟಿದ್ದಾರೆ. ಕಾಂಗ್ರೆಸ್ ಕಡೆಯಿಂದ ನನಗೆ ಬಿಗ್ ಆಫರ್ ಬಂದಿದೆ. ಲೋಕಸಭೆ ಚುನಾವಣೆ ಮುಗಿದ ಮೇಲೆ ನನಗೆ ಕ್ಯಾಬಿನೇಟ್ ರೇಂಜ್ ಆಫರ್ ಕೊಟ್ಡಿದ್ದಾರೆ ಅಂತ ದೇವರಾಜೇಗೌಡ ಹೇಳಿಕೆ ನೀಡಿದ್ದಾರೆ.

ಇದೀಗ ದೇವರಾಜೇಗೌಡ ಆರೋಪಕ್ಕೆ ಖುದ್ದು ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ ಡಿಕೆಶಿ, ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ, ಬಿಜೆಪಿ-ಜೆಡಿಎಸ್ ನಾಯಕರ ಅಣತಿಯಂತೆ ನನ್ನ ವಿರುದ್ಧ ಸುಳ್ಳು ಅಪಾದನೆ ಅಂತ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಬೈಕಾಟ್ ಡಿಕೆಶಿ ಎಂಬ ಕೂಗು ಎಲ್ಲೆಡೆ ಕೇಳಿ ಬರ್ತಿದೆ.

You may also like...

Leave a Reply

Your email address will not be published. Required fields are marked *