ಕನ್ನಡ ಚಿತ್ರರಂಗದಲ್ಲಿ ಬಾಲ ನಟನಾಗಿ ಮಿಂಚುತ್ತಿದ್ದ ಮಾಸ್ಟರ್ ಆನಂದ್ ಅವರು ಇತ್ತಿಚೆಗೆ ಮದುವೆಯಾಗಿ ಒಂದು ಹೆಣ್ಣುಮಗು ಕೂಡ ಇದೆ. ಇನ್ನು ಈ ಜೋಡಿ ಟೆಲಿವಿಷನ್ ಶೋ ಗಳಲಿ ತಮ್ಮ ಮಗಳನ್ನು ಹಾಕಿಕೊಂಡು ಡ್ಯಾನ್ಸ್ ಮಾಡಿ ಸಾಕಷ್ಟು ಫೇಮಸ್ ಆಗಿದ್ದರು. ಈ ಮಾಸ್ಟರ್ ಆನಂದ್ ಅವರ ಮಗಳ ಎಲ್ಲಾ ವಿಡಿಯೋಗಳು ಸಾಕಷ್ಟು ವೀಕ್ಷಣೆ ಪಡೆದುಕೊಂಡು ಎಲ್ಲರ ಗಮನ ಸೆಳೆದಿತ್ತು.
ಇನ್ನು ಈ ದಂಪತಿಗಳು ಇತ್ತಿಚಿನ ದಿನಗಳಲ್ಲಿ ಎಲ್ಲೂ ಸರಿಯಾಗಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಈ ಜೋಡಿ ಡಿವೋರ್ಸ್ ಆಗಿದೆ ಎಂಬ ವಂದತಿ ಎಲ್ಲೆಡೆ ಹಬ್ಬಿದೆ. ಆದರೆ ಈ ಜೋಡಿಯ ಡಿವೋರ್ಸ್ ವಂದತಿಯ ಬಳಿಕವೂ ಈ ಜೋಡಿ ಮಾಧ್ಯಮಗಳ ಮುಂದೆ ಬರಲಿಲ್ಲ. ಇನ್ನು ಇವರ ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟಿವ್ ಇಲ್ಲದೆ ಸಾಕಷ್ಟು ಅಭಿಮಾನಿಗಳಿಗೆ ಕುತೂಹಲ ಎದ್ದಿದೆ.
ಇನ್ನು ಮಾಸ್ಟರ್ ಆನಂದ್ ಅವರ ಹಿಂದೆ ಕಾಮಿಡಿ ಕಿಲಾಡಿ ನಯನಾ ಅವರು ಹಲವಾರು ವರ್ಷಗಳ ಹಿಂದೆ ಮಾಸ್ಟರ್ ಆನಂದ್ ಅವರನ್ನು ಇಷ್ಟಪಟ್ಟಿದ್ದರಂತೆ. ಈ ವಿಚಾರವನ್ನು ಸ್ವತಃ ನಯನಾ ಅವರು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಮಾಸ್ಟರ್ ಆನಂದ್ ಅವರ ಪತ್ನಿಯ ಮುಂದೆ ಹೇಳಿಕೊಂಡಿದ್ದಾರೆ.
ಕರ್ನಾಟಕದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಫಿನಾಲೆ ಹಂತಕ್ಕೆ ತಲುಪಿದ್ದು, ಈ ಬಾರಿ ಬಿಗ್ ಬಾಸ್ ಫಿನಾಲೆಯಲ್ಲಿ ಹನುಮಂತ ಟಿಕೆಟ್ ಪಡೆದಿದ್ದಾನೆ. ಇನ್ನು ಈ ವಾರದ ಬಿಗ್ ಬಾಸ್ ಟಾಸ್ಕ್ ನಲ್ಲಿ ತ್ರಿವಿಕ್ರಮ್ ಅವರು ಉತ್ತಮವಾಗಿ ಆಟವಾಡಿ ಫಿನಾಲೆ ಟಿಕೆಟ್ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಆದರೆ, ಹನುಮಂತನ ಹಿಂದೆ ತ್ರಿವಿಕ್ರಮ್ ಬಿದ್ದಿರುವುದು ನಿಜ. ಇನ್ನು ಈ ತ್ರಿವಿಕ್ರಮ್ ಹಿಂದೆ ಭವ್ಯಾ ಗೌಡ ಬಿದ್ದಿರುವ ಪರಿಣಾಮ ತ್ರಿವಿಕ್ರಮ್ ಗೆ ಸಿಗುವ ಫಿನಾಲೆ ಟಿಕೆಟ್ ಭವ್ಯಾ ಕೈ ಸೇರುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ವಾರದ ಆಟದಲ್ಲಿ ಭವ್ಯಾ ಗೌಡ ಹಾಗೂ ಮಂಜಣ್ಣ ಜೊತೆಗೆ ಗೌತಮಿ ಕೂಡ ಫಿನಾಲೆಗೆ ಹರಸಾಹಸ ಪಡುತ್ತಿದ್ದಾರೆ.
ಆದರೆ, ಆ ಕಡೆ ಧನರಾಜ್ ಹಾಗೂ ರಜತ್ ಸೈಲೆಂಟ್ ಆಗಿ ಫಿನಾಲೆ ಟಿಕೆಟ್ ಗೆ ಟಾಸ್ಕ್ ಮೂಲಕ ಉತ್ತರ ಕೊಡಲು ಮುಂದಾಗಿದ್ದಾರೆ. ಇನ್ನು ರಜತ್ ಅವರು ಈ ಬಾರಿ ಫಿನಾಲೆಗೆ ಹೋದರೆ ಅದೊಂದು ಇತಿಹಾಸ ಎನ್ನಬಹುದು. ಯಾಕೆಂದರೆ ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಇದುವರೆಗೂ ಫಿನಾಲೆಗೆ ಎಂಟ್ರಿ ಕೊಟ್ಟಿಲ್ಲ.
ಇತ್ತಿಚಿನ ಟಾಪ್ ಆಂಕರ್ ಆಗಿ ಕನ್ನಡ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳವ ಜಾಹ್ನವಿ ಅವರು ಇದೀಗ ಹೊಸ ಸಿಹಿಸುದ್ದಿ ಕೊಡಲು ಮುಂದಾಗಿದ್ದಾರೆ. ಕಳೆದ ಒಂದು ವರ್ಷಗಳ ಹಿಂದೆ ಗಂಡನಿಂದ ಡಿವೋರ್ಸ್ ಪಡೆದು ಇಷ್ಟು ದಿನಗಳ ಕಾಲ ಒಂಟಿ ಜೀವನ ಅನುಭವಿಸಿದ್ದ ಜಾಹ್ನವಿ ಅವರು ಇದೀಗ ಧೃಡ ನಿರ್ಧಾರ ಕೈಗೊಂಡಿದ್ದಾರೆ.
ಜಾಹ್ನವಿ ಅವರು ಡಿವೋರ್ಸ್ ಬಳಿಕ ಸಾಕಷ್ಟು ಕಷ್ಟ ಪಟ್ಟು ಚಿತ್ರರಂಗದ ಕಾರ್ಯಕ್ರಮ ಹಾಗೂ ಅಡುಗೆ ಮನೆ ಕಾರ್ಯಕ್ರಮದಲ್ಲಿ ಫೇಮಸ್ ಆಗಿದ್ದಾರೆ. ಇನ್ನು ಇವರ ಯೂಟ್ಯೂಬ್ ಚಾನಲ್ ಹಾಗೂ ಟಿವಿ ಚಾನಲ್‌ನಲ್ಲಿ ನಟ ನಟಿಯರ ಸಂದರ್ಶನ ಮಾಡುವ ಮೂಲಕ ಕನ್ನಡಿಗರ ಗಮನಸೆಳೆದಿದ್ದಾರೆ.
ಇನ್ನು ಜಾಹ್ನವಿ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ಆತನಿಗೆ ಇನ್ನು ಸಣ್ಣ ವಯಸ್ಸು. ಇನ್ನು ಸಣ್ಣ ವಯಸ್ಸಿನ ಮಗನಿಗೆ ಅಪ್ಪನ ಕೊರತೆ ಕಾಡಬಾರದು ಎಂಬ ಕಾರಣಕ್ಕೆ ಜಾಹ್ನವಿ ಅವರು ಮತ್ತೊಂದು ಮದುವೆ ಆಗಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಎದ್ದಿದೆ. ಇನ್ನು ಯೌವನದಲ್ಲಿರುವ ಜಾಹ್ನವಿ ಅವರಿಗೆ ಇನ್ನೊಂದು ಮದುವೆ ಆಗುವುದು ದೊಡ್ಡ ವಿಚಾರವಲ್ಲ ಎನ್ನುತ್ತಾರೆ ಅವರ ಫ್ಯಾನ್ಸ್.
ದೇಶದ ನಾನಾ ರಾಜ್ಯದ ಹಾಗೂ ಜಿಲ್ಲೆಯಿಂದ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿ ಶಬರಿಮಲೆಗೆ ಹೋಗುತ್ತಾರೆ. ಶತಮಾನಗಳ ಹಿಂದೆಯೇ ಈ ಪದ್ಧತಿ ರೂಢಿಯಲ್ಲಿದ್ದು. ಇದು ಇವತ್ತಿನವರೆಗೂ ಅದೇ ಪದ್ಧತಿಯ ಮೂಲಕ ಮಾಲೆ ಹಾಕಿ 18 ಮೆಟ್ಟಿಲೇರಿ ಆ ಮಹಾ ಪವಿತ್ರ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದರೆ ಅದೆಷ್ಟು ಪಾಪಾಗಳು ಕಳೆಯುತ್ತದೆ ಎಂಬ ಮಾತಿದೆ.
ಇನ್ನು ಪ್ರತಿ ವರ್ಷ ಮಕರ ಸಂಕ್ರಮಣದಂದು ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಕರ ಜ್ಯೋತಿ ಕಾಣುತ್ತದೆ. ಈ ಜ್ಯೋತಿ ಸರಿಸುಮಾರು ಸಂಜೆ 6:45ಕ್ಕೆ ಗುಡ್ಡದ ಮೇಲಿನಿಂದ ಭಕ್ತ ಸಮೂಹಕ್ಕೆ ಹಾಣುತ್ತದೆ. ಹಾಗೂ ಈ ಜ್ಯೋತಿಯನ್ನು ಕಂಡ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಜೋರಾಗಿ ಕೂಗುತ್ತಾರೆ.
ಇನ್ನು ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಕಾಣುವ ಈ ಜ್ಯೋತಿ ಬಗ್ಗೆ ಸಾಕಷ್ಟು ಜನ ಸಂಶೋಧನೆ ಮಾಡಿದ್ದಾರೆ. ಆದರೆ ಅವರಿಗೆ ಈ ವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಕೆಲವರು ಜ್ಯೋತಿ ಅಲ್ಲ ಅದು, ಮೇಲಿಂದ ಬೆಂಕಿ ಹಾಕುತ್ತಿದ್ದಾರೆ ಎಂದು ತಮ್ಮ ಅಭಿಪ್ರಾಯ ಹೇಳುತ್ತಾರೆ. ಆದರೆ ಇದು ಆ ಅಯ್ಯಪ್ಪ ಸ್ವಾಮಿಯ ಪವಾಡ ಎಂಬುವುದು ಅಯ್ಯಪ್ಪ ಸ್ವಾಮಿಯ ಕೋಟ್ಯಾಂತರ ಭಕ್ತರಿಗೆ ತಿಳಿದಿದೆ. ಈ ಬಗ್ಗೆ ಸಂಶೋಧನೆಗೂ ಮಾಹಿತಿ ಸಿಕ್ಕಿಲ್ಲ. ಈ ಜ್ಯೋತಿಯ ಮೂಲ ಹುಡುಕಲು ಸಾಧ್ಯವೂ ಇಲ್ಲ.
ಹೌದು, ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟರು, ಕ್ರಿಕೆಟಿಗರ ದಾಂಪತ್ಯ ಜೀವನದಲ್ಲಿ ಬಿರುಕು ಎನ್ನುವ ಸುದ್ದಿಗಳು ಸಾಕಷ್ಟು ಕೇಳಿಬರುತ್ತಿವೆ. ಕೆಲವು ಈಗಾಗಲೇ ವಿಚ್ಛೇದನದಲ್ಲಿ ಅಂತ್ಯವಾಗಿದೆ. ಇದೀಗ ಮತ್ತೊಬ್ಬ ಭಾರತೀಯ ಕ್ರಿಕೆಟಿಗನ ಜೀವನದಲ್ಲಿ ಬಿರುಗಾಳಿ ಎಬ್ಬಿದ್ದು, ಶೀಘ್ರದಲ್ಲೇ ಬೇರೆಯಾಗಲಿದ್ದಾರೆ ಎಂದು ಕೇಳಿಬರ್ತಿದೆ.
ಹಾರ್ದಿಕ್ ಪಾಂಡ್ಯಾ ಬೆನ್ನಲ್ಲೇ ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಆಟಗಾರನ ವಿಚ್ಛೇದನ ಸುದ್ದಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಭಾರತದ ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಪರಸ್ಪರ ಬೇರಾಗುತ್ತಿದ್ದಾರೆ ಎಂದು ಹೇಳಲಾಗ್ತಿದೆ.ಭಾರತ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಹಾಗೂ ಧನಶ್ರಿ ವರ್ಮಾ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹ ಹಲವು ದಿನಗಳಿಂದ ಸದ್ದು ಮಾಡ್ತಿದೆ.
ಇವರಿಬ್ಬರ ವಿಚ್ಛೇದನ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹರಿದಾಡುತ್ತಿರುವಂತೆಯೇ ಇತ್ತ ಇದಕ್ಕೆ ಇಂಬು ನೀಡುವಂತೆ ಕ್ರಿಕೆಟಿಗ ಯಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ತಮ್ಮ ಇನ್ ಸ್ಟಾಗ್ರಾಂ ಖಾತೆಗಳಿಂದ ಪರಸ್ಪರ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಚಹಲ್ ತಾವಿಬ್ಬರೂ ಜೊತೆಗಿದ್ದ ಎಲ್ಲ ಫೋಟೋ ಮತ್ತು ವಿಡಿಯೋಗಳನ್ನೂ ಕೂಡ ಡಿಲೀಟ್ ಮಾಡಿದ್ದಾರೆ. ಆದರೆ ಧನಶ್ರೀ ವರ್ಮಾ ಮಾತ್ರ ಚಹಲ್ರನ್ನ ಮಾತ್ರ ಅನ್ಫಾಲೋ ಮಾಡಿದ್ದರೂ ಸಧ್ಯಕ್ಕೆ ಯಾವುದೇ ಫೋಟೋಗಳನ್ನು ಡಿಲೀಟ್ ಮಾಡಿಲ್ಲ..
ಕೆಲವು ತಿಂಗಳ ಹಿಂದೆ ಧನಶ್ರೀ ತಮ್ಮ ಹೆಸರಿನ ಮುಂದೆ ಇದ್ದ ಚಹಲ್ ಹೆಸರನ್ನ ತೆಗೆದು ಹಾಕಿದ್ದರು. ಆಗಲೇ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ಊಹಾಪೋಹಗಳಿ ಹಬ್ಬಿದ್ದವು. ಇದೀಗ ಇಬ್ಬರೂ ಪರಸ್ಪರ ಅನ್ ಫಾಲೋ ಮಾಡಿಕೊಳ್ಳುವ ಮೂಲಕ ಈ ಊಹಾಪೋಹಗಳು ಮತ್ತಷ್ಟು ಇಂಬು ನೀಡಿದೆ.ಅಂದಹಾಗೆ ಮುಂಬೈನ ದಂತವೈದ್ಯೆ ಹಾಗೂ ಕೊರಿಯೋಗ್ರಾಫರ್ ಆಗಿದ್ದ, ಧನಶ್ರೀ ಅವರ ಬಳಿ ಯುಜ್ವೇಂದ್ರ ಚಾಹಲ್ ಡ್ಯಾನ್ಸ್ ಕಲಿಯಲು ಹೋಗುತ್ತಿದ್ದರು. ಹೀಗಾಗಿ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಈ ಜೋಡಿ, ತಮ್ಮದೇ ವಿಡಿಯೋಗಳ ಮೂಲಕ ಅಭಿಮಾನಿಗಳ ಸೆಳೆದಿದ್ದರು.
ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ಕಳೆದ ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಈ ಸ್ಟಾರ್ ಜೋಡಿಯ ವಿಚ್ಛೇದನದ ವದಂತಿಗಳು ಸದ್ದು ಮಾಡುತ್ತಿರುವುದು ಇದೇ ಮೊದಲಲ್ಲ. 2023ರಲ್ಲಿ ಧನಶ್ರೀ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಚಹಾಲ್ ಅವರನ್ನು ಅನ್‌ಫೋಲೋ ಮಾಡಿದ್ದರು. ಇದು ಅವರ ಸಂಬಂಧದ ಬಗ್ಗೆ ಊಹಾಪೋಹಗಳನ್ನು ಹೆಚ್ಚಿಸಿತು.
ಇದೇ ವೇಳೆ ಚಹಾಲ್ ಒಂದು ಪೋಸ್ಟ್ ಅನ್ನು ಮಾಡಿದ್ದರು. ಫೋಸ್ಟ್‌ನಲ್ಲಿ ‘ಹೊಸ ಜೀವನವು ಲೋಡ್ ಆಗುತ್ತಿದೆ’ ಎಂದು ಬರೆದುಕೊಂಡಿದ್ದರು. ಇದು ಕೂಡ ವಿಚ್ಛೇದನದ ಊಹಾಪೋಹಕ್ಕೆ ಕಾರಣವಾಗಿತ್ತು. ಆದಾಗ್ಯೂ, ಆ ಸಮಯದಲ್ಲಿ ಚಹಾಲ್ ವದಂತಿಗಳನ್ನು ತಳ್ಳಿಹಾಕಿದರು. ಸುಳ್ಳು ಮಾಹಿತಿಯನ್ನು ಹರಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಇದೀಗ ಚಹಾಲ್ ಮಾಡಿರುವ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಎರಡನೇ ದಿನದ ಆಟದಲ್ಲಿ ಮನೆಯ ಉಳಿದ ಸ್ಪರ್ಧಿಗಳಿಗೆ ಬಹು ಕಠಿಣ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಗೆದ್ದವರು ಈ ವಾರ ಬಿಗ್ ಬಾಸ್ ಮನೆಯ ಸೇಫ್ ಆಗಿರುತ್ತಾರೆ ಎಂದು ಬಿಗ್ ಬಾಸ್ ಕಡೆಯಿಂದ ಸ್ಪಷ್ಟತೆ ಬಂದಿತ್ತು. ಹಾಗಾಗಿ ಮನೆಯ ಸ್ಪರ್ಧಿಗಳು ತಾಮುಂದು ತಾಮುಂದು ಅಂತ ಆಟದಲ್ಲಿ ಭಾಗಿಯಾಗಿದ್ದಾರೆ.
ಇನ್ನು ಗೌತಮಿ ಹಾಗೂ ಮಂಜು ಹೊಸ ಪ್ಲಾನ್ ಮಾಡಿ ಟಾಸ್ಕ್ ಆಡಿದ್ದಾರೆ. ಆದರೆ, ಈ ಇಬ್ಬರ ಆಟಕ್ಕೆ ಅಷ್ಟೊಂದು ಪ್ರತಿಫಲ ಸಿಕ್ಕಿಲ್ಲ. ಇನ್ನು ಭವ್ಯಾ ಹಾಗೂ ತ್ರಿವಿಕ್ರಮ್ ನಡುವೆ ಅಂತರ ಉಂಟಾಗಿದ್ದು. ಈ ಇಬ್ಬರು ಯಾವುದೇ ಅತ್ಯತ್ತಮ ಪ್ರದರ್ಶನ ನೀಡಲಿಲ್ಲ. ಇನ್ನು ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಅತ್ಯಎ ಪ್ರದರ್ಶನ ಕೊಟ್ಟಿದ್ದಾರೆ.
ಇನ್ನು ಧನರಾಜ್ ಹಾಗೂ ಕ್ಯಾಪ್ಟನ್ ಹನುಮಂತನ ಆಟಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಈ ಇಬ್ಬರಲ್ಲಿ ಹನುನಂತ ಅತ್ಯುತ್ತಮವಾಗಿ ಟಾಸ್ಕ್ ಆಡಿ ಮತ್ತೆ ಗೆದ್ದಿದ್ದಾರೆ. ಇನ್ನು ಒಂಟಿ ಸಲಗ ರಜತ್ ಅವರು ಈ ವಾರದಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿ ಕಿಚ್ಚನ ಮೆಚ್ಚುಗೆಗೆ ಕಾರಣರಾಗಲಿದ್ದಾರೆ.
ಸ್ನೇಹಿತರೆ, ಕಳೆದ ಕೆಲ ದಿನಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್ ಒಂದಲ್ಲ ಒಂದು ವಿಷಯಕ್ಕೆ ಸದ್ದು ಮಾಡ್ತಿದ್ದಾರೆ. ಇನ್ನೇನು ಸಿಟಿ ರವಿ ಅವರೊಂದಿಗಿನ ಜಟಾಪಟಿ ಸುಮ್ಮನಾಯ್ತು ಅನ್ನುವಷ್ಟರಲ್ಲಿ ಇತ್ತೀಚೆಗಷ್ಟೇ ಸರ್ಕಾರದಿಂದ ಹೊಸ ಕಾರು ಪಡೆದಿದ್ದ ಹೆಬ್ಬಾಳ್ಕರ್ ಈ ಕಾರಿಗೆ ಲಕ್ಕಿ ನಂಬರ್ ಅಲಾಟ್ ಮಾಡಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಲಕ್ಕಿ ನಂಬರ್ ಹಾಗೂ ಲಕ್ಕಿ ಬಣ್ಣದ ಕಾರಿನಿಂದಲೇ ಇದೀಗ ಸಂಕಷ್ಟ ಎದುರಾಗಿದೆ. ಹೌದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಅಧಿಕೃತ ಸರ್ಕಾರಿ ಕಾರು ಬೆಳಗಾವಿಯ ಕಿತ್ತೂರು ಬಳಿ ಅಪಘಾತಕ್ಕೀಡಾಗಿ ಸಚಿವೆ ಆಸ್ಪತ್ರೆ ದಾಖಲಾಗಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಾಯವಾಗಿದೆ.
ಸ್ನೇಹಿತರೇ..ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ, ವಿಧಾನಪರಿಷತ್ ಸದಸ್ಯ ಚೆನ್ನರಾಜು ಹಟ್ಟಿಹೊಳಿ ಪ್ರಯಾಣಿಸುತ್ತಿದ್ದ ಕಾರು ಬೆಳಗಾವಿಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಭಾರೀ ಅಪಘಾತಕ್ಕೀಡಾಗಿದೆ. ರಸ್ತೆಯಲ್ಲಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದೆ.
ಹಾಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆನ್ನಿಗೆ ಬಲವಾದ ಪೆಟ್ಟಾಗಿದೆ. ಇವರ ಬೆನ್ನಿನ ಎಲ್1 ಮತ್ತು ಎಲ್4 ಫ್ರಾಕ್ಚರ್ ಆಗಿರುವುದು ಧೃಡವಾಗಿದೆ. ಕುತ್ತಿಗೆ ಹಾಗೂ ಮುಖ ಭಾಗಕ್ಕೆ ಕೂಡಾ ಸಣ್ಣ ಪುಟ್ಟ ಗಾಯಗಳಾಗಿವೆ.ಸದ್ಯ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಪತಿ ರವೀಂದ್ರ ಹೆಬ್ಬಾಳ್ಕರ್ ಅವರು ಪತ್ನಿಯ ಆರೋಗ್ಯ ವಿಚಾರಿಸಿದ್ದಾರೆ.
ಸ್ನೇಹಿತರೇ… ಕಳೆದ ಕೆಲ ದಿನಗಳ ಹಿಂದಷ್ಟೇ ನಡೆದಿದ್ದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ನಲ್ಲಿ ಎಂಎಲ್ಸಿ ಸಿಟಿ ರವಿ ಅವರು ನನ್ನ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ ಮಾಡಿದ್ದರು. ಆದರೆ, ಸಿಟಿ ರವಿಯವರು ಈ ಆರೋಪವನ್ನು ಅಲ್ಲಗೆಳದಿರು ನಾನು ಅಶ್ಲೀಲ ಪದವನ್ನು ಬಳಕೆ ಮಾಡಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಈ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು.
ಈ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಅಶ್ಲೀಲ ಪದ ಬಳಕೆ ಮಾಡಿಲ್ಲ ಅಂತ ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಹೇಳಿ, ನೋಡೋಣ. ಬನ್ನಿ ಧರ್ಮಸ್ಥಳಕ್ಕೆ ಪ್ರಮಾಣ ಮಾಡಿ ಹೇಳಿ. ಧರ್ಮಸ್ಥಳಕ್ಕೆ ಬನ್ನಿ, ನಾನೂ ಕೂಡ ಬರುತ್ತೇನೆ ಎಂದು ಸಿಟಿ ರವಿ ಅವರಿಗೆ ಬಹಿರಂಗ ಆಹ್ವಾನ ನೀಡಿದರು. ಆದರೆ ಸುಳ್ಳು ಆರೋಪ ಮಾಡಿದ್ದರಿಂದಲೇ ಧರ್ಮಸ್ಥಳದ ಮಂಜುನಾಥ ಮುನಿಸಿಕೊಂಡಿದ್ದಾನೆ ಹಾಗಾಗಿಯೇ ಈ ಘಟನೆ ಸಂಭವಿಸಿದೆ ಎಂದು ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ನೇಹಿತರೇ..ಒಟ್ಟಿನಲ್ಲಿ ಹೇಳುವುದಾದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಮಯವೇ ಸರಿ ಇರಲಿಲ್ಲ ಎಂದೆನಿಸುತ್ತದೆ. ಏಕೆಂದರೆ ಇತ್ತೀಚೆಗೆಷ್ಟೇ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸರ್ಕಾರದಿಂದ ಹೊಸ ಕಾರು ನೀಡಲಾಗಿತ್ತು. ವಿಶೇಷ ಅಂದರೆ ಸರ್ಕಾರ ನೀಡಿದ ಈ ಕಾರು ಕಪ್ಪು ಬಣ್ಣದಲ್ಲೇ ಇರಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮೊದಲೇ ಸೂಚಿಸಿದ್ದರು. ಕಾರಣ ವಾಹನಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅದೃಷ್ಠದ ಬಣ್ಣ ಕಪ್ಪು. ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಇರುವ ಎಲ್ಲಾ ಐಷಾರಾಮಿ ಹಾಗೂ ದುಬಾರಿ ಕಾರುಗಳ ಬಣ್ಣ ಕಪ್ಪು.
ಹಾಗೂ ಸರ್ಕಾರ ನೀಡಿದ ಕಪ್ಪು ಬಣ್ಣದ ಇನ್ನೋವಾ ಹೈಕ್ರಾಸ್ ಕಪ್ಪು ಬಣ್ಣದ ಕಾರಿಗೆ ಹೆಬ್ಬಾಳ್ಕರ್ ಕೆಎ 01 ಜಿಎ 9777 ನಂಬರ್ ಅಲಾಟ್ ಮಾಡಿಸಿಕೊಂಡಿದ್ದರು. ಅಷ್ಟಕ್ಕೂ ಹೆಬ್ಬಾಳ್ಕರ್ ಅವರ ಎಲ್ಲಾ ಕಾರಿನ ನಂಬರ್ 9777. ಅದು ಅವರ ಅದೃಷ್ಟದ ಸಂಖ್ಯೆ ಕೂಡಾ ಹೌದು ಆದರೆ ಇದೇ ಲಕ್ಕಿ ನಂಬರ್ ಕಾರು ಇದೀಗ ಅಪಘಾತಕ್ಕೀಡಾಗಿ ಸಚಿವೆ ಆಸ್ಪತ್ರೆ ಸೇರಿರುವುದು ಬೇಸರದ ಸಂಗತಿಯಾಗಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೀಗ ಬಾರಿ ದೊಡ್ಡ ಅಪಘಾತದಿಂದ ಪಾರಾದ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಸಚಿವೆ ಹೆಬ್ಬಾಳ್ಕರ್ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು, ಇಂದು ಮುಂಜಾನೆ ಚಾಲಕನ ನಿಯಂತ್ರಣ ತಪ್ಪಿ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಪಲ್ಟಿಯಾಗಿದೆ.
ಇನ್ನು ದೇಹದ ಮುಖ್ಯವಾದ ಮುಳೆತ್ ಭಾಗಕ್ಕೆ ಬಾರಿ ಹೊಡೆತ ಬಿದ್ದಿದೆ ಎನ್ನಲಾಗಿದೆ. ಇದೀಗ ಜಾಲತಾಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಪಘಾತ ದೃಶ್ಯ ಗಮನಿಸಬಹುದು. ಇನ್ನು ಇತ್ತಿಚೆಗೆ ಸಿಟಿ ರವಿ ಜೊತೆ ಜಗಳವಾಡಿಕೊಂಡ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಧರ್ಮಸ್ಥಳ ಕ್ಷೇತ್ರದ ಹೆಸರು ತೆಗೆದಿದ್ದರು.
ಇಷ್ಟು ಮಾತ್ರವಲ್ಲದೇ ಧರ್ಮಸ್ಥಳಕ್ಕೆ ಸಿಟಿ ರವಿ ಬಂದು ಪ್ರಮಾಣ ಮಾಡಲಿ ಎಂದಿದ್ದರು. ಹಾಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅಪಘಾತದ ಹಿಂದೆ ಹಲವಾರು ನಿಗೂಢ ವಿಚಾರಗಳು ಎದ್ದು ಕಾಣಿತ್ತಿದೆ.
ಲವರ್ಸ್ಗಳಿಗೆ ಟೈಮ್ ಪಾಸ್ ಮಾಡೋಣ ಅಂತಾ ಅಂದ್ಕೊಂಡ್ರೆ ಥಟ್ಟಂತ ನೆನಪು ಬರೋ ಜಾಗ ಅಂದ್ರೆ ಅದು ಪಾರ್ಕ್ ಮಾತ್ರ. ಹೌದು ಬೆಳಗ್ಗೆಯಿಂದ ಸಂಜೆತನಕ ಯಾವುದೇ ಸಮಯದಲ್ಲಿ ಪಾರ್ಕ್ಗೆ ಹೋದರೂ ಮರಗಳ ಅಡಿಯಲ್ಲೋ, ಪೊದೆಗಳೆಡೆಯಲ್ಲೋ ಅಥವಾ ಇನ್ನೆಲ್ಲೋ ಮೂಲೆಯಲ್ಲಿ ಪ್ರಣಯ ಪಕ್ಷಿಗಳು ಕಣ್ಣಿಗೆ ಕಾಣುತ್ತವೆ.
ಅಷ್ಟೇ ಅಲ್ಲ ಅಲ್ಲಿನ ಮರಗಿಡಗಳನ್ನು ಹಾಳು ಮಾಡೋದು, ತಿಂಡಿ ತಿಂದು ಪ್ಲಾಸ್ಟಿಕ್ ಎಸೆಯೋದು ಎಲ್ಲಾ ಇತರರೂ ಮಾಡ್ತಿರ್ತಾರೆ. ಹೌದು, ಪಾರ್ಕ್ ಒಂದರಲ್ಲಿ ಹೀಗೆ ಜೋಡಿ ಹಕ್ಕಿಗಳ ಕಾಟದಿಂದ ದಿನನಿತ್ಯ ಸಾವಿರಾರು ಮಂದಿ ವಾಯು ವಿಹಾರಕ್ಕೆ ಬರುವ ಈ ಜಾಗದಲ್ಲಿ ಪ್ರೇಮಿಗಳು ಸಾರ್ವಜನಿಕರಿಗೆ ಮುಜುಗರ ಆಗುವಂತೆ ವರ್ತಿಸಬಾರದು ಎಂದು ಈಗಾಗಲೇ ಅನೇಕ ಬಾರಿ ಸೂಚನೆ ನೀಡಿದ್ದರೂ ಇನ್ನೂ ಕೂಡ ತಮ್ಮದೇ ಲೋಕದಲ್ಲಿ ಮೈಮರೆಯುವವರಿಗೇನೂ ಕಮ್ಮಿ ಇಲ್ಲ.
ಇಂತಹದ್ದೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಇದೀಗ ಜೋಡಿ ಹಕ್ಕಿಗಳ ಮೇಲೆ ಕೇಸ್ ದಾಖಲಿಸಿದೆ.ಮನೆಯಲ್ಲಿ ಹೇಳದೆ ಕಾಲೇಜಿಗೆ ಹೊಗ್ತೇವೆ ಎಂದು ಹೇಳಿ ಜೋಡಿಗಳು ಬಂದು ಮಣಿಪಾಲದ ಪಾರ್ಕ್ ಗೆ ಬಂದು ಮೈರೆತಿದ್ದ ಪ್ರಣಯ ಪಕ್ಷಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಮಣಿಪಾಲದ ಕಾಲೇಜು ವಿದ್ಯಾರ್ಥಿಗಳಿಗೆ ಮುಂದೆ ಪಾರ್ಕ್ ನಲ್ಲಿ ಜೋಡಿಯಾಗಿ ಕಾಣಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಮ್ಮೆ ಕಾಣ ಸಿಕ್ಕರೆ ಕೇಸ್ ದಾಖಲಿಸುವುದಾಗಿ ಹೇಳಿದ್ದರೆ. ಇದರಿಂದ ಸಾರ್ವಜನಿಕರು ಇನ್ನಾದರೂ ನೆಮ್ಮದಿಯಿಂದ ಪಾರ್ಕ್ ನಲ್ಲಿ ಓಡಾಡಬಹುದು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ವೀಕ್ಷಕರೆ, ಬಿಗ್ಬ್ಬಾಸ್ ಕನ್ನಡದ ಪ್ರತಿ ಸೀಸನ್ ನಲ್ಲೂ ಕನಿಷ್ಟ ಒಂದು ‘ಜೋಡಿ’ ಖಾಯಂ ಆಗಿ ಇರುತ್ತದೆ. ಈ ಸೀಸನ್ನಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಆರಂಭದಿಂದಲೂ ಒಬ್ಬರಿಗೊಬ್ಬರ ಎಂಬಂತೆ ಅಂಟಿಕೊಂಟೇ ಇದ್ದಾರೆ. ಇದೀಗ ಈ ಇಬ್ಬರ ನಡುವೆ ಪ್ರೀತಿ-ಪ್ರೇಮ ಶುರುವಾಗಿದೆಯೇ ಎಂಬ ಅನುಮಾನ ವೀಕ್ಷಕರಿಗೆ ಶುರುವಾಗಿದೆ. ಇದಕ್ಕೆ ಕಾರಣ ಅವರು ಪರಸ್ಪರ ಗುಟ್ಟಾಗಿ ಆಡಿರುವ ಮಾತುಗಳು.
ಹೌದು, ಶನಿವಾರದ ಎಪಿಸೋಡ್ ಪ್ರಸಾರವಾದಾಗ ಸುದೀಪ್ ಆಗಮಿಸುವ ಮೊದಲು ಹಿಂದಿನ ನಡೆದ ಕೆಲವು ಘಟನೆಗಳನ್ನು ತೋರಿಸಲಾಯ್ತು. ಈ ಸಂದರ್ಭದಲ್ಲಿ ಎಲ್ಲರೂ ಮಲಗಿದ ಮೇಲೆ ತ್ರಿವಿಕ್ರಮ್ ಮತ್ತು ಭವ್ಯಾ ಅವರು ಮೂಲೆಯಲ್ಲಿ ಕೂತು ಏನೋ ವಿಷಯ ಮಾತನಾಡುತ್ತಿದ್ದರು. ಮೊದಲಿಗೆ ಅದು ಏನೆಂದು ವೀಕ್ಷಕರಿಗೆ ಗೊತ್ತಾಗಿರಲಿಲ್ಲವಾದರೂ ಅವರ ಮಾತುಕತೆ ಮುಂದುವರೆದಂತೆ ಅರ್ಥವಾಗಿದ್ದು, ಇಬ್ಬರೂ ಪ್ರೀತಿಯ ವಿಷಯ ಚರ್ಚಿಸುತ್ತಾರೆ ಎಂಬುದು.
ತ್ರಿವಿಕ್ರಮ್, ಭವ್ಯಾ ಕುರಿತು, ನೀನು ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ’ ಎನ್ನುತ್ತಾರೆ. ಅದಕ್ಕೆ ಭವ್ಯಾ ಖುಷಿಯಿಂದ ಕೊಡುತ್ತೇನೆ, ಸ್ವಲ್ಪ ದಿನ ಕಾಯಿ ಎನ್ನುತ್ತಾರೆ. ‘ನೀನು ಆಡುತ್ತಿರುವ ರೀತಿ, ಮಾತನಾಡುತ್ತಿರುವುದು ನೋಡಿದರೆ ನೆಗೆಟಿವ್ ಉತ್ತರ ನೀಡುತ್ತೀಯ ಅನಿಸುತ್ತಿದೆ’ ಎನ್ನುತ್ತಾರೆ ತ್ರಿವಿಕ್ರಮ್. ಅದಕ್ಕೆ ಭವ್ಯಾ ನಗುತ್ತಾ, ‘ಅಯ್ಯೋ ಹಾಗೇನಿಲ್ಲ. ಸ್ವಲ್ಪ ವೇಟ್ ಮಾಡು’ ಎಂದು ನಗುತ್ತಾ ಹೇಳುತ್ತಾರೆ. ಹಾಗೆ ಮಾತು ಮುಂದುವರೆಸಿ, ‘ಸ್ವಲ್ಪ ದಿನ ಆಗಲಿ, ಹೊರಗೆ ಹೋದ ಮೇಲೆ ಹೇಳುತ್ತೀನಿ’ ಎಂದು ಭವ್ಯಾ ಹೇಳುತ್ತಾರೆ.
ತ್ರಿವಿಕ್ರಮ್ ಸಹ ಆಡಿ ಗೆದ್ದು ಆ ಮೇಲೆ ನಿನ್ನ ಬಳಿ ಆ ಬಗ್ಗೆ ಮಾತನಾಡುತ್ತೀನಿ’ ಎನ್ನುತ್ತಾರೆ. ಒಟ್ಟಾರೆ ಇಬ್ಬರೂ ಸಹ ಗುಟ್ಟಿನಲ್ಲಿ ಪ್ರೀತಿಯ ವಿಚಾರವನ್ನೇ ಮಾತನಾಡಿದ್ದಾರೆ ಎಂಬುದು ವೀಕ್ಷಕರಿಗೆ ಅರ್ಥವಾಗಿದೆ.ಅಸಲಿಗೆ ಸ್ಪರ್ಧಿಗಳ ಪೋಷಕರು ಮನೆಗೆ ಬಂದಾಗ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರ ಮನೆಯವರೂ ಸಹ ಪರಸ್ಪರರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದರು.
ಆ ನಂತರ ವೀಕೆಂಡ್ನಲ್ಲಿ ನಡೆದ ಆಕ್ಟಿವಿಟಿಯಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರು ಇನ್ನು ಮುಂದೆ ತಾವು ಪರಸ್ಪರರ ಗೆಳೆತನ ಮುರಿಯುವುದಾಗಿ ಹೇಳಿದ್ದರು. ಆ ನಂತರವೂ ಸಹ ಒಬ್ಬರ ಬಗ್ಗೆ ಇನ್ನೊಬ್ಬರು ಕೆಲ ಚುಚ್ಚು ಮಾತುಗಳನ್ನು ಆಡಿಕೊಂಡಿದ್ದರು.